Bengaluru Stampede; ಮನೋಜ್ ಬಗ್ಗೆ ಇಟ್ಟುಕೊಂಡಿದ್ದ ಕನಸುಗಳೆಲ್ಲ ನುಚ್ಚುನೂರು, ತಂದೆಯ ಆಕ್ರಂದನ
ಮನೋಜ್ ವಿಧಾನ ಸೌಧದ ಬಳಿ ಹೋಗಿ ಆಟಗಾರರನ್ನು ನೋಡಿ ವಾಪಸ್ಸು ಬರುತ್ತೇನೆ ಅಂತ ಅಪ್ಪನಿಗೆ ತಿಳಿಸಿ ಹೋಗಿದ್ದನಂತೆ. ಊಟಕ್ಕೆ ಕುಳಿತಿದ್ದ ಮಗನನ್ನು ಅವನ ಸ್ನೇಹಿತ ಅವಸರಿಸಿ ಕರೆದುಕೊಂಡು ಹೋಗಿದ್ದ ಎಂದು ಹೇಳುವ ಮನೋಜ್ ತಂದೆ ಅವನೇನಾದರೂ ಚಿನ್ನಸ್ವಾಮಿ ಬಳಿ ಹೋಗುವೆ ಅಂತ ಹೇಳಿದ್ದರೆ ಹೋಗದಂತೆ ತಡೆಯುತ್ತಿದೆ ಎಂದು ಹತಾಷೆಯಲ್ಲಿ ಹೇಳುತ್ತಾರೆ.
ತುಮಕೂರು, ಜೂನ್ 5: ಇದ್ದೊಬ್ಬನೇ ಮಗನನ್ನು ಕಳೆದುಕೊಂಡು ತುಮಕೂರು ಮೂಲದ ಈ ತಂದೆ ಅನುಭವಿಸುತ್ತಿರುವ ದುಃಖ, ನೋವು, ಸಂಕಟ, ಯಾತನೆ, ಹತಾಷೆ ನೋಡಲಾಗದು, ಹೇಳಲಾಗದು. ನಿನ್ನೆ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತಕ್ಕೆ ಬಲಿಯಾದ 11 ಜನರಲ್ಲಿ ಇವರ 19-ವರ್ಷದ ಮನೋಜ್ (Manoj) ಸಹ ಒಬ್ಬ. ನಗರದ ಕಾಲೇಜೊಂದರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಮನೋಜ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮತ್ತು ನತದೃಷ್ಟ ತಂದೆ ಮಗನ ಕುರಿತು ಅನೇಕ ಕನಸುಗಳನ್ನು ಇಟ್ಟುಕೊಂಡಿದ್ದರು. ಯಲಹಂಕ ಓಲ್ಡ್ ಟೌನ್ನಲ್ಲಿ ವಾಸವಾಗಿರುವ ಇವರು ತಮ್ಮ ಹುಟ್ಟೂರು ಕುಣಿಗಲ್ ತಾಲ್ಲೂಕಿನ ನಾಗಸಂದ್ರದಲ್ಲಿ ಮಗನ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.
ಇದನ್ನೂ ಓದಿ: ‘ನನಗೂ ಉಸಿರುಗಟ್ಟಿತ್ತು’; ಚಿನ್ನಸ್ವಾಮಿ ಸ್ಟೇಡಿಯಂ ಕರಾಳ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ