Bengaluru Stampede; ಕನ್ನಡಿಗರೇ ಇಲ್ಲದ ಆರ್ಸಿಬಿ ತಂಡಕ್ಕೆ ಸಿಎಂ ಮಟ್ಟದಲ್ಲಿ ಸನ್ಮಾನ ಬೇಕಿರಲಿಲ್ಲ: ಹಿರಿಯ ನಾಗರಿಕ
ಸನ್ಮಾನ ಸಮಾರಂಭವನ್ನು ಸರ್ಕಾರವನ್ನು ವ್ಯವಸ್ಥಿತವಾಗಿ ಅಯೋಜಿಸದ ಕಾರಣ, ಜನ ಪ್ರಾಣ ಕಳೆದುಕೊಂಡರು ಮತ್ತು ಹಲವಾರು ಜನ ಗಾಯಗೊಂಡರು. ಸಮಾರಂಭಕ್ಕೆ ಮಿನಿಸ್ಟ್ರಗಳ ಕುಟುಂಬಗಳು ಬಂದಿದ್ದವು, ಇದು ಚೀಫ್ ಮಿನಿಸ್ಟ್ರು ಹೆಸರಲ್ಲಿ ನಡೆಯುವ ಕಾರ್ಯಕ್ರಮವಾಗದೆ ಚೀಪ್ ಕಾರ್ಯಕ್ರಮ ಅನಿಸಿಕೊಂಡಿತು, ಸರ್ಕಾರದ ತಪ್ಪಿನಿಂದಾಗಿ ಜನ ಪ್ರಾಣ ಕಳೆದುಕೊಂಡರು ಎಂದು ಹಿರಿಯ ನಾಗರಿಕ ಹೇಳಿದರು.
ಬೆಂಗಳೂರು, ಜೂನ್ 5: ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ದುರಂತದಲ್ಲಿ ಮಡಿದವರ ಕುಟುಂಬಸ್ಥರು, ಆಪ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತಾಡುತ್ತಿರುವ ಹಿರಿಯ ವ್ಯಕ್ತಿಯೊಬ್ಬರು ಕೆಲಸ ಮಾಡುವ ಸಂಸ್ಥೆಯಲ್ಲೇ ನಿನ್ನೆಯ ದುರ್ಘಟನೆಯಲ್ಲಿ ಮಡಿದ ಚಿನ್ಮಯಿ ಶೆಟ್ಟಿಯ ತಂದೆ ಮ್ಯಾನೇಜರ್ ಅಗಿ ಕೆಲಸ ಮಾಡುತ್ತಾರೆ. ಇವರು ಹೇಳುವ ಪ್ರಕಾರ ಒಬ್ಬೇಒಬ್ಬ ಕನ್ನಡಿಗನಿಲ್ಲದ ಅರ್ಸಿಬಿ ತಂಡದ ಸದಸ್ಯರಿಗೆ ಮುಖ್ಯಮಂತ್ರಿಯವರ ಮಟ್ಟದಲ್ಲಿ ಸನ್ಮಾನ ಮಾಡುವ ಅವಶ್ಯಕತೆಯಿರಲಿಲ್ಲ. ಅರ್ಸಿಬಿ ಒಂದು ಸಣ್ಣ ಸಂಸ್ಥೆ, ಅದೊಂದು ಕ್ಲಬ್ ಅಷ್ಟೇ, ಅದರೆ ಕರ್ನಾಟಕ ಸರ್ಕಾರ ರಾಜಕೀಯ ಲಾಭಗಳಿಗಾಗಿ ಸತ್ಕಾರ ಕೂಟ ಏರ್ಪಡಿಸಿತ್ತು ಎಂದು ಅವರು ಹೇಳಿದರು.
ಇದನ್ನೂ ಓದಿ: Bengaluru Stampede; ಮನೋಜ್ ಬಗ್ಗೆ ಇಟ್ಟುಕೊಂಡಿದ್ದ ಕನಸುಗಳೆಲ್ಲ ನುಚ್ಚುನೂರು, ತಂದೆಯ ಆಕ್ರಂದನ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
