Bengaluru Stampede; ಕಾಲ್ತುಳಿತದ ಘಟನೆಯಲ್ಲಿ ಸತ್ತವರನ್ನು ನೆನೆದು ಕಣ್ಣೀರು ಹಾಕಿದ ಡಿಕೆ ಶಿವಕುಮಾರ್
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಸರಕಾರವನ್ನು ದೂಷಿಸುತ್ತಾರೆ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ, ಹೆಣಗಳ ಮೇಲೆ ಮತ್ತು ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಬಿಜೆಪಿ ನಾಯಕರಿಗೆ ಸಿದ್ಧಿಸಿರುವ ಕಲೆ, ಅವರ ಆಡಳಿತದಲ್ಲಿ ನಡೆದ ದುರ್ಘಟನೆಗಳ ಲಿಸ್ಟ್ ತಾನು ಕೊಡಬಲ್ಲೆ, ಅವರಂತೆ ತಾನು ರಾಜಕಾರಣ ಮಾಡಲ್ಲ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು, ಜೂನ್ 5: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar), ನಿನ್ನೆ ನಡೆದ ಕಾಲ್ತುಳಿತ ಘಟನೆಯಲ್ಲಿ ಸತ್ತವರನ್ನು ನೆನೆದು ಕಣ್ಣೀರು ಹಾಕಿದರು. ಚಿಕ್ಕ ಮಕ್ಕಳ ಸಾವನ್ನು ಅವರ ಕುಟುಂಬಗಳು ಅರಗಿಸಿಕೊಳ್ಳಲಾಗಲ್ಲ, ನಾಡಿನ ಜನರೆಲ್ಲ ಅವರಿಗಾಗಿ ದುಃಖಿಸುತ್ತಿದ್ದಾರೆ ಎಂದು ಗದ್ಗದಿತ ಧ್ವನಿಯಲ್ಲಿ ಅವರು ಹೇಳಿದರು. ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ಬೆಂಗಳೂರಿಗೆ ಬರುತ್ತಿರುವ ವಿಷಯವನ್ನು ತಿಳಿಸಿದ್ದರು ಹಾಗಾಗಿ ಸರ್ಕಾರಕ್ಕೆ ಬೇರೆ ಆಪ್ಷನ್ ಇರಲಿಲ್ಲ, ಸನ್ಮಾನ ಮಾಡಲೇಬೇಕಿತ್ತು, ಯಾರನ್ನೂ ದೂಷಿಸುವ ಪ್ರಯತ್ನ ತಾನು ಮಾಡುತ್ತಿಲ್ಲ, ಘಟನೆಯಿಂದ ಪಾಠ ಕಲಿಯಬೇಕಿದೆ ಎಂದು ಶಿವಕುಮಾರ್ ಹೇಳಿದರು.
ಇದನ್ನೂ ಓದಿ: Bangalore Stampede: ಕಾಲ್ತುಳಿತಕ್ಕೆ ಸರ್ಕಾರದ ವೈಫಲ್ಯವೇ ಕಾರಣ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ