AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB victory parade stampede: ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!

RCB victory parade stampede: ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು…!

ರಮೇಶ್ ಬಿ. ಜವಳಗೇರಾ
|

Updated on: Jun 05, 2025 | 7:38 PM

Share

ಬೆಂಗಳೂರಿನಲ್ಲಿ ನಿನ್ನೆ ಯಾರು ಊಹಿಸಲಾರದ ಘಟನೆ ನಡೆದು ಹೋಗಿದೆ. ಏಕಾಏಕಿ ಚಿನ್ನಸ್ವಾಮಿ ಮೈದಾನಕ್ಕೆ ಅಪಾರ ಅಭಿಮಾನಿಗಳು ಹರಿದು ಬಂದ ಪರಿಣಾಮ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ ಘೋರ ದುರಂತದಲ್ಲಿ 11 ಮಂದಿ ಅಮಾಯಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಘಟನೆ ಸಂಬಂಧ RCB ಮ್ಯಾನೆಜ್​ಮೆಂಟ್​ ವಿರುದ್ಧ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ಎಫ್ಐಆರ್​ ದಾಖಲಾಗಿದೆ. ಇನ್ನು ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕಳ್ಳರ ಕೈಚಳಕ ತೋರಿಸಿದ್ದಾರೆ.

ಬೆಂಗಳೂರು, (ಜೂನ್ 05):  ಬೆಂಗಳೂರಿನಲ್ಲಿ ನಿನ್ನೆ ಯಾರು ಊಹಿಸಲಾರದ ಘಟನೆ ನಡೆದು ಹೋಗಿದೆ. ಏಕಾಏಕಿ ಚಿನ್ನಸ್ವಾಮಿ ಮೈದಾನಕ್ಕೆ ಅಪಾರ ಅಭಿಮಾನಿಗಳು ಹರಿದು ಬಂದ ಪರಿಣಾಮ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ ಘೋರ ದುರಂತದಲ್ಲಿ 11 ಮಂದಿ ಅಮಾಯಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಘಟನೆ ಸಂಬಂಧ RCB ಮ್ಯಾನೆಜ್​ಮೆಂಟ್​ ವಿರುದ್ಧ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ಎಫ್ಐಆರ್​ ದಾಖಲಾಗಿದೆ. ಇನ್ನು ನೂಕುನುಗ್ಗಲು ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕಾಲ್ತುಳಿತದ ವೇಳೆ ಕಳ್ಳರು ನೂರಾರು ಮೊಬೈಲ್‌ ಎಗರಿಸಿದ್ದಾರೆ. ಈ ಬಗ್ಗೆ ಮೊಬೈಲ್ ಕಳೆದುಕೊಂಡುವರು ದೂರು ನೀಡಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಟ್ಟು 70ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಇನ್ನು ಮೊಬೈಲ್ ಕಳೆದುಕೊಂಡುವರು ದೂರು ನೀಡಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಸಾಲುಗಟ್ಟಿನಿಂತಿರುವ ದೃಶ್ಯ ಇಲ್ಲಿದೆ ನೋಡಿ