ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; ಕುಲುವಿನ ಸೈಂಜ್ ಕಣಿವೆಯಲ್ಲಿ ದಿಢೀರ್ ಪ್ರವಾಹ
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಸೈಂಜ್ ಕಣಿವೆಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಹಠಾತ್ ಪ್ರವಾಹ ಉಂಟಾಗಿದೆ. ಭಾರೀ ಮಳೆಯಿಂದಾಗಿ ಕುಲುವಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಭಾರೀ ಪ್ರವಾಹದಿಂದಾಗಿ ಪಾರ್ವತಿ ನದಿಯೂ ಉಕ್ಕಿ ಹರಿಯುತ್ತಿದೆ. ಇದುವರೆಗೂ ಯಾವುದೇ ಜೀವಹಾನಿ ಅಥವಾ ಆಸ್ತಿ ಪಾಸ್ತಿ ನಷ್ಟ ಸಂಭವಿಸಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಕುಲು, ಜೂನ್ 25: ಹಿಮಾಚಲ ಪ್ರದೇಶದ ಪ್ರಮುಖ ಪ್ರವಾಸಿ ಸ್ಥಳವಾದ ಕುಲುವಿನ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಕುಲುವಿನಲ್ಲಿ (Kullu Floods) ಮೇಘಸ್ಫೋಟ ಉಂಟಾಗಿದ್ದು, ಸೈಂಜ್ ವ್ಯಾಲಿಯಲ್ಲಿ (Sainj Valley) ದಿಢೀರ್ ಪ್ರವಾಹ ಉಂಟಾಗಿದೆ. ಪಾರ್ವತಿ ನದಿಯೂ (Parvathy River) ಉಕ್ಕಿ ಹರಿಯುತ್ತಿದ್ದು, ದಡದಲ್ಲಿರುವ ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಸೈಂಜ್ ಕಣಿವೆಯಲ್ಲಿ ನದಿ ನೀರು ಕೆಂಪಾಗಿ ಭೋರ್ಗರೆಯುತ್ತಾ ಹರಿದು, ಇಡೀ ಊರನ್ನೇ ಆಕ್ರಮಿಸಿಕೊಳ್ಳುತ್ತಿದೆ. ಈ ಹಿಂದೆ 1953ರಲ್ಲಿ ಇದೇ ರೀತಿಯ ಪ್ರವಾಹ ಸಂಭವಿಸಿತ್ತು. ಅದು ಐತಿಹಾಸಿಕ ಪ್ರವಾಹವಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jun 25, 2025 06:06 PM
Latest Videos

ಚಿಕ್ಕಬಳ್ಳಾಪುರ: 1 ಕೋಟಿ 11 ಲಕ್ಷ ರೂ ಮೌಲ್ಯದ ಕುದುರೆಗೆ ಅದ್ದೂರಿ ಸ್ವಾಗತ

ಸಿಬ್ಬಂದಿಯನ್ನ ಹೆದರಿಸಿ ಮಸಾಜ್ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್

ಬೀದರ್ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ

ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
