ಕಾಮದಾಸೆಗಾಗಿ ಗಂಡ ಮಕ್ಕಳನ್ನು ಬಿಟ್ಟು ಇನ್ಸ್ಟಾ ಗೆಳೆಯನೊಂದಿಗೆ ಸುತ್ತಿದ ಪ್ರೀತಿ ಅವನಿಂದ್ಲೇ ಕೊಲೆಯಾದಳು!
ಪ್ರೀತಿ ತಾನೇ ಫೋನ್ ಮಾಡಿ ಪುನೀತ್ ನನ್ನು ತನ್ನೂರಿಗೆ ಕರೆಸಿಕೊಂಡಿದ್ದಾಳೆ. ಅವನು ಕಾರಲ್ಲಿ ಬಂದ ನಂತರ ಇಬ್ಬರೂ ಮಂಡ್ಯ ಮತ್ತು ಮೈಸೂರಲ್ಲಿ ಸುತ್ತಾಡಿದ್ದಾರೆ. ಅವಕಾಶವಿದ್ದ ಕಡೆಯೆಲ್ಲ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ವಾಪಸ್ಸು ಬರುವಾಗಲೂ ಅಕೆ ಕಾರಲ್ಲಿ ಸೆಕ್ಸ್ಗಾಗಿ ಪೀಡಿಸಿದಾಗ ತಾಳ್ಮೆ ಕಳೆದುಕೊಂಡ ಪುನೀತ್ ಅಕೆಯ ಕೆನ್ನೆಗೆ ಬಾರಿಸಿದ್ದಾನೆ. ಕೆಳಗೆ ಬಿದ್ದು ಮೂರ್ಛೆ ತಪ್ಪಿದವಳ ಮೇಲೆ ಕಲ್ಲು ಎತ್ತಿಹಾಕಿ ಕೊಂದುಬಿಟ್ಟಿದ್ದಾನೆ.
ಮಂಡ್ಯ, ಜೂನ್ 25: ಈ ಮಹಿಳೆಯನ್ನು ನೋಡಿ. ಮದುವೆಯಾಗಿ ಗಂಡ ಮಕ್ಕಳೊಂದಿಗೆ ನೆಮ್ಮದಿಯಾಗಿದ್ದ ಈಕೆ ಕೇವಲ 4 ದಿನಗಳ ಅಂತರದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಪುನೀತ್ ಹೆಸರಿನ ಯುವಕನನ್ನು ಪರಿಚಯ ಮಾಡಿಕೊಂಡು ಅವನೊಂದಿಗೆ ಸುತ್ತಾಡಿ ಲಾಡ್ಜ್ ಒಂದರಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿ ಮೊನ್ನೆ ಸೋಮವಾರ ಅವನಿಂದಲೇ ಕೊಲೆಯಾಗಿದ್ದಾಳೆ. ಮಂಡ್ಯದ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ (Mallikarjun Baladandi) ಹೇಳುವ ಪ್ರಕಾರ ಹಾಸನ ಜಿಲ್ಲೆ ಹೊಸಕೊಪ್ಪಲು ಗ್ರಾಮದ 38-ವರ್ಷ ವಯಸ್ಸಿನ ಪ್ರೀತಿ ಹೆಸರಿನ ಗೃಹಿಣಿ, ಮಂಡ್ಯ ಜಿಲ್ಲೆ ಕೆಅರ್ ಪೇಟೆ ತಾಲೂಕಿನ ಕರೋಟಿ ಗ್ರಾಮದ ಯುವಕ ಪುನೀತ್ನೊಂದಿಗೆ ಬೆಳೆಸಿದ ವಿವಾಹೇತರ ಸಂಬಂಧಕ್ಕೆ ಭಾರೀ ಬೆಲೆ ತೆತ್ತಿದ್ದಾಳೆ. ಆಕೆಯ ಗಂಡ ಸುಂದರೇಶ್ ಎನ್ನುವವರು ಪ್ರೀತಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ ಬಳಿಕ ಅಕೆಯ ಶವ ಕರೋಟಿ ಗ್ರಾಮದಲ್ಲಿರುವ ಪುನೀತ್ ಜಮೀನಲ್ಲಿ ಸಿಕ್ಕಿದೆ.
ಇದನ್ನೂ ಓದಿ: ಯುವಕನ ಹಿಂದೆ ಬಿದ್ದು ಹೆಣವಾದ ಎರಡು ಮಕ್ಕಳ ತಾಯಿ: ಲಾಂಗ್ ಡ್ರೈವ್ ಕೊಲೆ ರಹಸ್ಯ ಬಯಲು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ