ಬಿಜೆಪಿಯವರ ಮನೆಗೆ ನೀರು ಬಿಡೋದಿಲ್ಲ..ಸ್ಟೇಟಸ್ ಹಾಕಿದ್ದ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷನ ಮೇಲೆ ಹಲ್ಲೆ
ಕಲಬುರಗಿ ಜಿಲ್ಲೆಯ ವಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಈರಣ್ಣ ಯಾರಿ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತ ಹಲ್ಲೆ ಮಾಡಿದ್ದಾನೆ. ಕಾಂಗ್ರೆಸ್ ಕಾರ್ಯಕರ್ತ ಪೃಥ್ವಿರಾಜ್ ಹಲ್ಲೆ ಮಾಡಿದ ಆರೋಪಿ. ಈ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ನಡೆದಿದ್ದು, ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ, ಜೂನ್ 24: ಬಿಜೆಪಿಯವರ (BJP) ಮನೆಗೆ ನೀರು ಬಿಡುವುದಿಲ್ಲ ಎಂದು ಸ್ಟೇಟಸ್ ಹಾಕಿದ್ದಕ್ಕೆ ವಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಈರಣ್ಣ ಯಾರಿ ಮೇಲೆ ಕಾಂಗ್ರೆಸ್ (Congress) ಕಾರ್ಯಕರ್ತ ಹಲ್ಲೆ ಮಾಡಿದ್ದಾನೆ. ವಾಡಿ ಪುರಸಭೆ ಮಾಜಿ ಸದಸ್ಯ, ಕೈ ಕಾರ್ಯಕರ್ತ ಪೃಥ್ವಿರಾಜ್ ಹಲ್ಲೆ ಮಾಡಿದ ಆರೋಪಿ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಘಟನೆ ನಡೆದಿದೆ.
ವಾಡಿ ಪುರಸಭೆಯಿಂದ ಕಾಂಗ್ರೆಸ್ನವರ ಮನೆಗೆ ಮಾತ್ರ ನೀರು ಬಿಡುತ್ತಾರೆ. ಬಿಜೆಪಿಯವರ ಮನೆಗೆ ನೀರು ಬಿಡಲ್ಲ ಎಂದು ಈರಣ್ಣ ಯಾರಿ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದರು. ಈ ಕಾರಣಕ್ಕೆ ಅಧ್ಯಕ್ಷ ಈರಣ್ಣ ಯಾರಿ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ನಡೆಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ