AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಪಟ್ನಾದ ಧಾಬಾ ಬಳಿ ತ್ರಿವಳಿ ಕೊಲೆ ಮಾಡಿದ ಆರೋಪಿಗಳನ್ನು ಸೆರೆಹಿಡಿದ ಪೊಲೀಸರು

ಕಲಬುರಗಿ: ಪಟ್ನಾದ ಧಾಬಾ ಬಳಿ ತ್ರಿವಳಿ ಕೊಲೆ ಮಾಡಿದ ಆರೋಪಿಗಳನ್ನು ಸೆರೆಹಿಡಿದ ಪೊಲೀಸರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 25, 2025 | 3:18 PM

Share

ಈಗಾಗಲೇ ನಾವು ವರದಿ ಮಾಡಿರುವಂತೆ ಇಂದು ಬೆಳಗ್ಗೆ ಪಟ್ನಾದಲ್ಲಿರುವ ಧಾಬಾವೊಂದರಲ್ಲಿ ಸಿದ್ಧಾರೂಢ (32), ಜಗದೀಶ್ (25) ಮತ್ತು ರಾಮಚಂದ್ರ (35) ಎನ್ನುವವರನ್ನು ಮಾರಕಸ್ತ್ರಗಳಿಂದ ಹಲ್ಲೆ ನಡೆಸಿ ಕೊಲ್ಲಲಾಗಿತ್ತು. ಕೊಲೆಯಾದ ಮೂವರು ಸಂಬಂಧಿಕರೆನ್ನುವುದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆಗಳು ನಡೆದಿರುವುದು ಬೆಳಕಿಗೆ ಬಂದಿದೆ.

ಕಲಬುರಗಿ, ಜೂನ್ 25: ನಗರ ಹೊರವಲಯದ ಪಟ್ನಾದಲ್ಲಿರುವ ಧಾಬಾವೊಂದರಲ್ಲಿ ಇಂದು ಬೆಳಗಿನ ಜಾವ ಮೂವರನ್ನು ಹರಿತ ಆಯುಧಗಳಿಂದ ಕೊಚ್ಚಿ ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಸಬ್​ಅರ್ಬನ್ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ನಮ್ಮ ಕಲಬುರಗಿ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಆರೋಪಿಗಳನ್ನು ನಗರ ಪೊಲೀಸ್ ಕಮೀಷನರ್ ಡಾ ಶರಣಪ್ಪ ಎಸ್​ಡಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳಲ್ಲಿ ಇಬ್ಬರ ಹೆಸರು ಗೊತ್ತಾಗಿದ್ದು ಅವರನ್ನು ಈರಣ್ಣ ತಾಳಿಕೋಟಿ ಮತ್ತು ರಾಚಣ್ಣ ಎಂದು ಗುರುತಿಸಲಾಗಿದೆ. ಒಬ್ಬ ಆರೋಪಿಯನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಕಾಲರ್ ಹಿಡಿದು ಸ್ಟೇಶನ್​ಗೆ ತರುತ್ತ್ತಿರುವುದನ್ನು ನೋಡಬಹುದು. ಪೊಲೀಸರ ಏಟಿಗೆ ಈ ಆರೋಪಿ ಪ್ಯಾಂಟಲ್ಲೇ ಮೂತ್ರ ವಿಸರ್ಜಿಸಿಕೊಂಡಿರುವಂತಿದೆ, ಸೂಕ್ಷ್ಮವಾಗಿ ಗಮನಿಸಿ.

ಇದನ್ನೂ ಓದಿ: ಸ್ನೇಹಿತನ ತಂಗಿಗೆ ಕರೆ ಮಾಡಿ ಅಸಭ್ಯ ಮಾತು: ರೊಚ್ಚಿಗೆದ್ದ ಅಣ್ಣ ಮತ್ತು ಗ್ಯಾಂಗ್​ನಿಂದ ತ್ರಿವಳಿ ಕೊಲೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ