ಬೆಂಗಳೂರಿನಲ್ಲಿ ತ್ರಿಬಲ್ ಮರ್ಡರ್: ಇಬ್ಬರು ಮಕ್ಕಳು, ಹೆಂಡ್ತಿಯನ್ನು ಕೊಂದ ಹೋಂ ಗಾರ್ಡ್!
ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿ ಭಯಾನಕ ಘಟನೆ ನಡೆದಿದೆ. ಗೃಹ ರಕ್ಷಕನಾಗಿದ್ದ ಗಂಗರಾಜು ತನ್ನ ಪತ್ನಿ ಭಾಗ್ಯ ಮತ್ತು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಪೀಣ್ಯ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಮಕ್ಕಳ ಗುರುತು ಇನ್ನೂ ಪತ್ತೆಯಾಗಿಲ್ಲ.
ನೆಲಮಂಗಲ, ಜನವರಿ 08: ಪತಿಯಿಂದಲೇ ಪತ್ನಿ ಹಾಗೂ ಇಬ್ಬರು ಮಕ್ಕಳ ಬರ್ಬರ ಹತ್ಯೆ (kill) ಮಾಡಿರುವಂತಹ ಘಟನೆ ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ. ಪತ್ನಿ ಭಾಗ್ಯ(38), ಭಾಗ್ಯ ಅಕ್ಕನ ಮಗಳು ಹೇಮಾವತಿ(22) ಮತ್ತು ಮಗಳು ನವ್ಯಾ(19) ಬರ್ಬರ ಹತ್ಯೆಗೈದು ಹೋಂ ಗಾರ್ಡ್ ಆಗಿರುವ ಪತಿ ಗಂಗರಾಜು ಪರಾರಿಯಾಗಿದ್ದ. ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪೀಣ್ಯ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಆರೋಪಿ ಗಂಗರಾಜು ನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಹೇಳಿದ್ದಿಷ್ಟು
ಘಟನೆ ಸಂಬಂಧ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಪ್ರತಿಕ್ರಿಯಿಸಿದ್ದು, ಇವತ್ತು ಸಂಜೆ 5 ಗಂಟೆಗೆ 112 ಮುಖಾಂತರ ಮಾಹಿತಿ ಬಂತು. ಸ್ಥಳಕ್ಕೆ ಹೊಯ್ಸಳ ಬಂದು ಪರಿಶೀಲಿಸಿದ್ದಾರೆ. ಈ ವೇಳೆ ಮೂರು ಹೆಂಗಸರ ಕೊಲೆ ನಡೆದಿರುವುದು ಪತ್ತೆಯಾಗಿದೆ. ಮಹಿಳೆ ಭಾಗ್ಯ, ಆಕೆಯ ಮಗಳು ನವ್ಯ, ಸಂಬಂಧಿ ಹೇಮಾವತಿ ಎಂಬುವವರ ಕೊಲೆಯಾಗಿದೆ.
ಒಂದೇ ಕೊಣೆಯಲ್ಲಿ ಕೊಲೆ ಮಾಡಲಾಗಿದೆ. ಗಂಗರಾಜು ಎಂಬಾತನಿಂದ ಕೊಲೆ ನಡೆದಿದೆ. ಗಂಗರಾಜು ಕೊಲೆಯಾದ ಭಾಗ್ಯ ಗಂಡ. ಹೆಬ್ಬುಗೋಡಿಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತಿದ್ದಾನೆ. ಕೊಲೆ ಮಾಡಿದ ಬಳಿಕ ವೆಪನ್ ಸಮೇತ ಆತನೇ ಠಾಣೆಗೆ ಬಂದು ಶರಣಾಗಿದ್ದಾನೆ. ಮೂಲತಃ ಇವರು ನೆಲಮಂಗಲದವರು. ಕಳೆದ ಆರು ವರ್ಷದಿಂದ ಬಾಡಿಗೆ ಮನೆಯಲ್ಲಿ ಇಲ್ಲಿ ವಾಸವಾಗಿದ್ದರು. ಯಾಕೆ ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ವಿಚಾರಣೆ ಮಾಡಲಾಗುತ್ತೆ. ನಂತರದಲ್ಲಿ ತಿಳಿಯಲಿದೆ ಎಂದು ಹೇಳಿದ್ದಾರೆ.
ಸೆಲ್ಫ್ ಆಕ್ಸಿಡೆಂಟ್ಗೆ ಬೈಕ್ ಸವಾರ ಸಾವು
ಸೆಲ್ಫ್ ಆಕ್ಸಿಡೆಂಟ್ಗೆ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಮಾದಪಟ್ಟಣ ಸಮೀಪ ಅಪಘಾತ ಸಂಭವಿಸಿದೆ. ಒಡಿಶಾ ಮೂಲದ ರೋಹಿತ್ ದಾಸ್ ಸಾವನ್ನಪ್ಪಿದ ಬೈಕ್ ಸವಾರ. ರೋಹಿತ್ ದಾಸ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ.
ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಪರಿಚಯವಾದ ಫೋಟೋಗ್ರಾಫರ್ನನ್ನ ನಂಬಿ ಮೋಸ ಹೋದ ಯುವತಿ: ವಿಡಿಯೋ ಇಟ್ಟುಕೊಂಡು ಲೈಂಗಿಕ ದೌರ್ಜನ್ಯ
ಹಾರಗದ್ದೆಯಿಂದ ಜಿಗಣಿ ಮಾರ್ಗವಾಗಿ ಬರುವ ವೇಳೆ ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ರಕ್ತದ ಮಡವಿನಲ್ಲಿ ಬಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಜಿಗಣಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ಮಾಡಿದ್ದು, ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಸಾವು
ಮತ್ತೊಂದು ಪ್ರಕರಣದಲ್ಲಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಸವಾರರು ಸಾವನ್ನಪ್ಪಿರುವಂತಹ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪಂಡಿತಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ನಡೆದಿದೆ.
ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಪುತ್ರನಿಂದ ಕಿರಿಕ್ ಆರೋಪ: ತಹಶೀಲ್ದಾರ್ ಕಾರಿಗೆ ಅಡ್ಡಬಂದು ಪುಂಡಾಟ
ಮಂಚನಹಳ್ಳಿ ಗ್ರಾಮದ ನಾಗಸ್ವಾಮಿ, ದೊಡ್ಡಮಾದಯ್ಯ ಮೃತರು. ಬೆಂಗಳೂರಿನಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ KSRTC ಬಸ್ ಡಿಕ್ಕಿ ಹೊಡೆದಿದೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:17 pm, Wed, 8 January 25