ಮುಕ್ತಾಯ ಹಂತಕ್ಕೆ ಸಿಗಂದೂರು ಸೇತುವೆ ಕಾಮಗಾರಿ: ಡ್ರೋನ್ ಕಣ್ಣಲ್ಲಿ ಸೆರೆಯಾಯ್ತು ಲೋಡ್ ಟೆಸ್ಟಿಂಗ್ ದೃಶ್ಯ
ಸಿಗಂದೂರು ಸೇತುವೆಯ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. 450 ಕೋಟಿ ರೂ ವೆಚ್ಚದ ಈ ಸೇತುವೆ ಕೊಲ್ಲೂರು ಮತ್ತು ಸಿಗಂದೂರು ದೇವಸ್ಥಾನಗಳನ್ನು ಸಂಪರ್ಕಿಸುತ್ತದೆ. ಇದು ದೇಶದ ಎರಡನೇ ಅತಿ ಉದ್ದದ ಹಾಗೂ ಕರ್ನಾಟಕದ ಅತಿ ಉದ್ದದ ಹ್ಯಾಂಗಿಂಗ್ ಸೇತುವೆಯಾಗಿದೆ. ವಿಡಿಯೋ ನೋಡಿ.
ಶಿವಮೊಗ್ಗ, ಜೂನ್ 25: ಸಿಗಂದೂರು (Shigandur) ಸೇತುವೆಯ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಇದೀಗ ಲೋಡ್ ಗಟ್ಟಲೇ ಟಿಪ್ಪರ್ ಲಾರಿಗಳನ್ನು ಹ್ಯಾಂಗಿಂಗ್ ಸೇತುವೆ ಮೇಲೆ ನಿಲ್ಲಿಸಿ ಲೋಡ್ ಟೆಸ್ಟಿಂಗ್ಮಾಡಲಾಗಿದೆ. ಕೊಲ್ಲೂರು ಮತ್ತು ಸಿಗಂಧೂರು ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಸುಮಾರು 450 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ದೇಶದ ಎರಡನೇ ಉದ್ದದ ಸೇತುವೆ ಇದಾಗಿದೆ. ಸೇತುವೆ ಪರಿಶೀಲನೆಯ ದೃಶ್ಯ ಡ್ರೋನ್ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.