AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಕನ ಹಿಂದೆ ಬಿದ್ದು ಹೆಣವಾದ ಎರಡು ಮಕ್ಕಳ ತಾಯಿ: ಲಾಂಗ್​ ಡ್ರೈವ್ ಕೊಲೆ ರಹಸ್ಯ ಬಯಲು

ಆಕೆ ಎರಡು ಮಕ್ಕಳ ತಾಯಿ. ಸಾಮಾಜಿಕ ಜಾಲತಾಣದಲ್ಲಿ ಸ್ಮಾರ್ಟ್​ ಯುವಕ ಸಿಕ್ಕ ಅಂತ ಪರಿಚಯ ಮಾಡಿಕೊಂಡಿದ್ದಾಳೆ.ಆದ್ರೆ, ನಾಲ್ಕೆ‌ ದಿನದಲ್ಲೇ‌ ಚಾಟಿಂಗ್ ಡೇಟಿಂಗ್ ನಡೆದಿದೆ.ಬಳಿಕ ಲಾಂಗ್​ ಡ್ರೈವ್​ ನಲ್ಲಿ ಲೈಂಗಿಕ ಕ್ರೀಯೆಗೆ ಒತ್ತಾಯಿಸಿ ಕೊನೆಗೆ ಭೀಕರವಾಗಿ ಹತ್ಯೆಯಾಗಿದ್ದಾಳೆ. ಅಷ್ಟಕ್ಕೂ ಲಾಂಗ್​ ಡ್ರೈವ್​ ನಲ್ಲಿ ಆಂಟಿ ಹಾಗೂ ಯುವಕನ ಮಧ್ಯೆ ನಡೆದಿದ್ದೇನು? ಆಂಟಿಯನ್ನು ಯುವಕ ಕೊಲೆ ಮಾಡಿದ್ಯಾಕೆ ಎನ್ನುವ ಡಿಟೇಲ್​ ಇಲ್ಲಿದೆ.

ಯುವಕನ ಹಿಂದೆ ಬಿದ್ದು ಹೆಣವಾದ ಎರಡು ಮಕ್ಕಳ ತಾಯಿ: ಲಾಂಗ್​ ಡ್ರೈವ್ ಕೊಲೆ ರಹಸ್ಯ ಬಯಲು
Preeti And Punith
ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ|

Updated on: Jun 25, 2025 | 6:51 PM

Share

ಮಂಡ್ಯ, (ಜೂನ್ 25): ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ವಿವಾಹಿತ ಮಹಿಳೆಯನ್ನು ಯುವಕನೊಬ್ಬ ಕೊಲೆ ಮಾಡಿದ್ದು, ಬಳಿಕ ಶವವನ್ನು ತನ್ನ ಜಮೀನಿನಲ್ಲಿ ಬಚ್ಚಿಟ್ಟಿದ್ದ ಘಟನೆ ಮಂಡ್ಯದ ಕೆ.ಆರ್. ಪೇಟೆ ತಾಲ್ಲೂಕಿನ ಕರೋಟಿ ಗ್ರಾಮದಲ್ಲಿ ನಡೆದಿದೆ. ಹಾಸನದ ಹೊಸಕೊಪ್ಪಲಿನ ನಿವಾಸಿ ಪ್ರೀತಿ ಎನ್ನುವಾಕೆ ಸಾಮಾಜಿಕ ಜಾಲತಾಣದಲ್ಲಿ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕರೋಠಿ ಗ್ರಾಮದ ಪುನೀತ್ ಎನ್ನುವಾತನ ಪರಿಚಯವಾಗಿದ್ದು, ಕೆಲವೇ ದಿನಗಳಲ್ಲಿ ಇಬ್ಬರು ಲಾಂಗ್ ಡ್ರೈವ್ ಗೆ ಹೋಗಿದ್ದಾರೆ. ಆ ವೇಳೆ ಪ್ರೀತಿ, ಪದೇ ಪದೇ ಲೈಂಗಿಕ ಕ್ರಿಯೆಗೆ ಪೀಡಿಸಿದ್ದಾಳೆ.ಆದ್ರೆ, ನಿರಾಕರಿಸಿದ್ದಕ್ಕೆ ಪುನೀತ್​ ಗೆ ಕೊಂಕು ಮಾತಿನಿಂದ ಹಿಯಾಳಿಸಿದ್ದಾಳೆ. ಇದರಿಂದ ಕೋಪಗೊಂಡ ಪುನೀತ್, ಪ್ರೀಯನ್ನು ಕೊಂದು ತನ್ನ ಜಮೀನಿನಲ್ಲಿ ಶವ ಬಚ್ಚಿಟ್ಟಿದ್ದ ಎನ್ನುವುದು ತನಿಖೆಯಲ್ಲಿ ಬಟಾಬಯಲಾಗಿದೆ.

ಸಾಮಾಜಿಕ ಜಾಲತಾಣದ ಮೂಲಕ ಪರಿಚಯ

ಹಾಸನದ ಹೊಸಕೊಪ್ಪಲಿನ ನಿವಾಸಿ ಪ್ರೀತಿಗೆ ಸುಂದರ ಕುಟುಂಬವಿದ್ದು, ಮುದ್ದಾದ ಎರಡು ಮಕ್ಕಳು ಸಹ ಇದ್ದಾರೆ. ಈಕೆಯ ಗಂಡ ಆಟೋ‌ ಡ್ರೈವರ್, ಈಕೆ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುತ್ತಿದ್ದಳು. ಈಕೆ ಯಾವಾಗಲೂ ಫೇಸ್‌ಬುಕ್‌ನಲ್ಲಿ ಚಾಟ್ ಮಾಡುವ ಹವ್ಯಾಸ ಸಹ ಇತ್ತು. ಈ ಪ್ರೀತಿ ಕಳೆದ ಗುರುವಾರ ರಾತ್ರಿ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕರೋಠಿ ಗ್ರಾಮ ಪುನೀತ್ ಎಂಬ ಯುವಕನಿಗೆ ಫೇಸ್‌ಬುಕ್‌‌ನಲ್ಲಿ ರಿಕ್ವೆಸ್ಟ್ ಕಳಿಸಿದ್ದಳು. ತನ್ನ ಅಕೌಂಟ್‌ಗೆ ರಿಕ್ವೆಸ್ಟ್ ಬಂದ್ದದ್ದೆ ತಡ ಈ ಪುನೀತ್ ಅಕ್ಸೇಪ್ಟ್ ಮಾಡಿದ್ದ.ಇದಾದ ನಂತರ ಪ್ರೀತಿ ಪುನೀತನಿಗೆ ಹಾಯ್ ಎಂದು ಮೆಸೇಜ್ ಮಾಡಿದ್ದಾಳೆ. ಇದಕ್ಕೆ ಪ್ರತಿಯಾಗಿ ಪುನೀತ್ ರಿಪ್ಲೇ ಮಾಡಿದ್ದ. ಬಳಿಕ ಇಬ್ಬರು ಪರಸ್ಪರ ರಾತ್ರಿ ಇಡೀ ಮೆಸೆಜ್ ಮಾಡಿದ್ದು, ಶುಕ್ರವಾರ ಬೆಳಗ್ಗೆ ಪ್ರೀತಿ ಪುನೀತ್ ಜೊತೆ ಪೋನ್ ನಂಬರ್ ಎಕ್ಸ್ ಚೆಂಜ್ ಮಾಡಿದ್ದಾಳೆ. ಬಳಿಕ ಒಂದೇ ದಿನದಲ್ಲಿ ಮಾತುಕತೆ ನಡೆದಿದೆ.

ಇದನ್ನೂ ಓದಿ: ಕಾಮದಾಸೆಗಾಗಿ ಗಂಡ ಮಕ್ಕಳನ್ನು ಬಿಟ್ಟು ಇನ್​ಸ್ಟಾ ಗೆಳೆಯನೊಂದಿಗೆ ಸುತ್ತಿದ ಪ್ರೀತಿ ಅವನಿಂದ್ಲೇ ಕೊಲೆಯಾದಳು!

ಲಾಂಗ್ ಡ್ರೈವ್ ಹೋಗಲು ಕರೆದಿದ್ದ ಪ್ರೀತಿ

ಇದಾಗಿ ಆಕೆ‌ ಮೀಟ್ ಮಾಡುವಂತೆ ಪುನೀತ್​ ಗೆ ಹೇಳಿದ್ದಾಳೆ. ಆಕೆ ಕರೆದದ್ದೆ ತಡ ಪುನೀತ ಓಕೆ ಎಂದು ಭಾನುವಾರ ಬೆಳಗ್ಗೆ ತನ್ನ ಸ್ನೇಹಿತನ ಕಾರು ತೆಗೆದುಕೊಂಡು ಹಾಸನಕ್ಕೆ ಹೋಗಿದ್ದಾನೆ. ಅತ್ತ ಪ್ರೀತಿ ತನ್ನ ಮನೆಯವರಿಗೆ ಸ್ನೇಹಿತೆಯ ಮಗಳ ಶಾಸ್ತ್ರ ಇದೆ ಅಲ್ಲಿಗೆ ಹೋಗ್ತೀನಿ ಎಂದು ಮನೆಯಿಂದ ಬಂದಿದ್ದಾಳೆ. ನಂತರ ಪುನೀತನ ಕಾರು ಹತ್ತಿ ನನ್ನ ಎಲ್ಲಿಗಾದರೂ ದೂರ ಕರೆದುಕೊಂಡು ಹೋಗು ಲಾಂಗ್ ಡ್ರೈವ್ ಹೋಗಿ ಬರೋಣಾ ಎಂದು ಹೇಳಿದ್ದಾಳೆ. ಅವಳು ಹೇಳಿದನ್ನು ಕೇಳಿ ಪುನೀತ್, ಕೆಆರ್‌ಎಸ್ ಕಡೆಗೆ ಕಾರನ್ನು ಡ್ರೈವ್ ಮಾಡಿದ್ದಾನೆ. ಬಳಿಕ ಅಲ್ಲಿ ಒಂದು ಲಾಡ್ಜ್‌ನಲ್ಲಿ ಬುಕ್ ಮಾಡಿಕೊಂಡು ತಮ್ಮ ಕಾಮದ ಬಯಕೆಯನ್ನು ತೀರಿಸಿಕೊಂಡಿದ್ದಾರೆ. ಆಕೆ‌ ಮತ್ತೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾಳೆ. ಆದ್ರೆ ಪುನೀತ್ ಒಪ್ಪದೆ ಲಾಡ್ಜ್​ ನಿಂದ ಇಬ್ಬರು ಬಂದಿದ್ದಾರೆ.

ಇದನ್ನೂ ಓದಿ
Image
ಬಾತ್‌ರೂಮಲ್ಲೇ ವ್ಯಕ್ತಿಯ ಬರ್ಬರ ಹತ್ಯೆ, ಜಾಲಿ ಜಾಲಿ ಎಂದವರು ಜೈಲಿಗೆ
Image
ಪರಿಚಯವಾಗಿ ಹತ್ತೇ ದಿನಕ್ಕೆ ವಿವಾಹಿತ ಮಹಿಳೆ ಕೊಲೆ: ಚಿನ್ನಾಭರಣ ದೋಚಿದ ಯುವಕ
Image
ಪ್ರೇಮಿಗಳ ನಡುವೆ ಕಿರಿಕ್: ಆ ವಿಡಿಯೋದಿಂದಲೇ ದುರಂತ ಸಾವುಕಂಡ ಪ್ರೇಯಸಿ
Image
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!

ಲೈಂಗಿಕ ಕ್ರಿಯೆಗೆ ಪೀಡಿಸಿ ಕೊಲೆಯಾದ ಪ್ರೀತಿ

ಇಷ್ಟಕ್ಕೆ ಬಿಡದ ಆಕೆ ವಾಪಸ್ಸು ಹೋಗದೆ ಯಾರು ಇಲ್ಲದ ಸ್ಥಳಕ್ಕೆ ಕರೆದೋಗುವಂತೆ ಒತ್ತಾಯಿಸಿದ್ದಾಳೆ. ಈಗ ಪುನೀತ್ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶಕ್ಕೆ ಕರೆದೋಗಿದ್ದಾನೆ. ಆ ವೇಳೆಯೂ ಸಹ ಪ್ರೀತಿ ಲೈಂಗಿಕ ಕ್ರಿಯೆ ಒತ್ತಾಯಿಸಿದ್ದಾಳೆ.ಆದರೂ ಪುನೀತ್ ಒಪ್ಪಿಲ್ಲ. ಇದಕ್ಕೆ ಪ್ರೀತಿ, ಪುನೀತನಿಗೆ ರೇಗಿಸಿದ್ದಾಳೆ. ಇದರಿಂದ ಕೋಪಗೊಂಡ ಪುನೀತ್ ಆಕೆಗೆ ಕಪಾಳ‌ ಬಾರಿಸಿದ್ದಾನೆ. ಈ ವೇಳೆ ಆಕೆ ಪ್ರಜ್ಞೆ ತಪ್ಪಿದ್ದರಿಂದ ಗಾಬರಿಗೊಂಡು ಆಕೆಯನ್ನ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾನೆ.

ಕೊಲೆ ರಹಸ್ಯ ಬಯಲಾಗಿದ್ಹೇಗೆ?

ಇನ್ನು ಮೃತ ದೇಹವನ್ನ ತನ್ನ ತೋಟಕ್ಕೆ ತಂದು ಇಟ್ಟಿದ್ದಾನೆ.ಬಳಿಕ ತಾನೊಬ್ಬ ಕಾರ್ ಡ್ರೈವರ್, ಕಾರಿನಲ್ಲಿ ಮೊಬೈಲ್ ಬಿಟ್ಟುಹೋಗಿದ್ದಾರೆ ಎಂದು ಹೇಳಿ ಮೊಬೈಲ್ ನ್ನು ಪ್ರೀತಿ ಪತಿಗೆ ತಲುಪಿಸಿದ್ದಾನೆ.‌ ಈ ವೇಳೆ ಅನುಮಾನಗೊಂಡು ಪ್ರೀತಿ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ. ಈ ದೂರು ಸ್ವೀಕರಿಸಿದ ಪೊಲೀಸರು ಪುನೀತ್​​ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ಒಟ್ಟಾರೆ ಸುಂದರ ಯುವಕನ ಹಿಂದೆ ಬಿದ್ದವಳು ಮಸಣ ಸೇರಿದ್ದು ಮಾತ್ರ ವಿಪರ್ಯಾಸ.