ಡಿಕೆ ಸುರೇಶ್ ರ ‘ದಕ್ಷಿಣ ಭಾರತ’ ಹೇಳಿಕೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಅರ್ಥೈಸಿದ ಡಿಕೆ ಶಿವಕುಮಾರ್
ಕರ್ನಾಟಕ ಮತ್ತು ದಕ್ಷಿಣ ಭಾರತದ ರಾಜ್ಯಗಳೆಡೆ ಕೇಂದ್ರ ಸರ್ಕಾರ ಮಲತಾಯಿ ದೋರಣೆ ತಳೆದಿರುವುದನ್ನು ತಮ್ಮ ಸಹೋದರ ಪ್ರಶ್ನಿಸಿದ್ದಾರೆ, ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಪ್ರತ್ಯೇಕತೆಯ ಕೂಗು ಏಳಬಹುದು ಅಂತ ಅವರು ಹೇಳಿದ್ದಾರೆ ಅಂತ ಶಿವಕುಮಾರ್ ಹೇಳಿದರು.
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕನ್ನಡಕ್ಕಿಂತ ಇಂಗ್ಲಿಷ್ ಭಾಷೆಯಲ್ಲಿ (English language) ಪ್ರತಿಕ್ರಿಯೆಗಳನ್ನು ಉತ್ತಮವಾಗಿ ನೀಡುತ್ತಾರೆ ಅನಿಸುತ್ತೆ ಮಾರಾಯ್ರೇ! ಆಂಗ್ಲ ಭಾಷೆಯನ್ನು ಅವರು ನಿರರ್ಗಳವಾಗಿ ಮಾತಾಡುವುದನ್ನು ನೀವಿಲ್ಲಿ ಕೇಳಿಸಿಕೊಳ್ಳಬಹುದು. ಅವರ ಸಹೋದರ ಡಿಕೆ ಸುರೇಶ್ (DK Suresh) ನೀಡಿದ ಪ್ರತ್ಯೇಕ ದಕ್ಷಿಣ ಭಾರತ ಹೇಳಿಕೆಯ ಬಗ್ಗೆ ಇಂಗ್ಲಿಷ್ ಮಾಧ್ಯಮ ವರದಿಗಾರ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ತಾನು ಮತ್ತು ತನ್ನ ಸಹೋದರ ಭಾರತೀಯರು, ಭಾರತದಲ್ಲಿ ಹುಟ್ಟಿದ್ದೇವೆ ಭಾರತದಲ್ಲೇ ಸಾಯುತ್ತೇವೆ, ಕಾಶ್ಮೀರದಿಂದ ಕನ್ಯಾಕುಮಾರಿ ಮತ್ತು ಪೂರ್ವದಿಂದ ಪಶ್ಚಿಮ ಭಾರತ ಒಂದಾಗಿದೆ; ಅದರ ಐಕ್ಯತೆ ಮತ್ತು ಸಾರ್ವಭೌಮತೆ ಪ್ರಶ್ನಾತೀತವಾದದ್ದು ಎಂದರು. ಕರ್ನಾಟಕ ಮತ್ತು ದಕ್ಷಿಣ ಭಾರತದ ರಾಜ್ಯಗಳೆಡೆ ಕೇಂದ್ರ ಸರ್ಕಾರ ಮಲತಾಯಿ ದೋರಣೆ ತಳೆದಿರುವುದನ್ನು ತಮ್ಮ ಸಹೋದರ ಪ್ರಶ್ನಿಸಿದ್ದಾರೆ, ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಪ್ರತ್ಯೇಕತೆಯ ಕೂಗು ಏಳಬಹುದು ಅಂತ ಅವರು ಹೇಳಿದ್ದಾರೆ ಅಂತ ಶಿವಕುಮಾರ್ ಹೇಳಿದರು.
ಅದರೆ ಅವರು ಹೇಳಿದ ಮಾತನ್ನು ಬಿಜೆಪಿ ರಾಜಕೀಕರಣಗೊಳಿಸುತ್ತಿದೆ. ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನು ಸಿಕ್ಕಿದೆ ಅಂತ ಅಂಕಿ ಅಂಶಗಳೇ ಸೂಚಿಸುತ್ತವೆ. ರಾಜ್ಯದ 27 ಬಿಜೆಪಿ ಸಂಸದರು ಪ್ರಧಾನಿಯವರನ್ನಾಗಲೀ, ಹಣಕಾಸು ಸಚಿವೆಯನ್ನಾಗಲೀ ಭೇಟಿ ಮಾಡಿ ಕರ್ನಾಟಕಕ್ಕೆ ಏನು ಬೇಕಿದೆ ಅಂತ ಹೇಳಿಲ್ಲ, ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗಲೂ ರಾಜ್ಯದ ಪರ ಧ್ವನಿಯೆತ್ತಲಿಲ್ಲ ಎಂದು ಶಿವಕುಮಾರ್ ಖಾರವಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ