ಕಣ್ಣಿಲ್ಲದ ಮಹಿಳೆಗೆ ಕಂತೆ ಕಂತೆ ಹಣ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್

| Updated By: ಆಯೇಷಾ ಬಾನು

Updated on: Jan 06, 2024 | 3:20 PM

ಹಲಸೂರಿನ RBNMS ಕಾಲೇಜಿನಲ್ಲಿ ನಡೆಯುತ್ತಿರುವ ಜನ ಸ್ಪಂದನ ಕಾರ್ಯಕ್ರಮದಲ್ಲಿ ಬಿಪಿಎಲ್ ಕಾರ್ಡ್ ಗಾಗಿ ಮನವಿ ನೀಡಿ ತಮ್ಮ ಕಷ್ಟ ಹೇಳಿಕೊಂಡ ವೃದ್ದ ಅಂಧ ಮಹಿಳೆಗೆ ಡಿಕೆ ಶಿವಕುಮಾರ್ ಅವರು ಜೇಬಿನಿಂದ 500 ರೂ. ಮುಖ ಬೆಲೆಯ ಕಂತು ಕಂತು ನೋಟುಗಳನ್ನು ಎತ್ತಿ ಅಂದ ಮಹಿಳೆ ಕೈಗಿಟ್ಟಿದ್ದಾರೆ.

ಬೆಂಗಳೂರು, ಜ.06: ಹಲಸೂರಿನ RBANMS ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಜನಸ್ಪಂದನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ವೃದ್ಧ ಅಂಧ ದಂಪತಿಗೆ ಧನ ಸಹಾಯ ಮಾಡಿದರು. ಬಿಪಿಎಲ್ ಕಾರ್ಡ್ ಗಾಗಿ ಮನವಿ ನೀಡಿ ತಮ್ಮ ಕಷ್ಟ ಹೇಳಿಕೊಂಡ ವೃದ್ದ ಅಂಧ ದಂಪತಿ ಕಣ್ಣೊರೆಸಿದ್ದಾರೆ. ಜೇಬಿನಿಂದ 500 ರೂ. ಮುಖ ಬೆಲೆಯ ಕಂತು ಕಂತು ನೋಟುಗಳನ್ನು ಎತ್ತಿ ಅಂದ ಮಹಿಳೆ ಕೈಗಿಟ್ಟಿದ್ದಾರೆ. ಹಾಗೂ ದಂಪತಿ ಮನೆ ಬಾಗಿಲಿಗೆ ಬಿಪಿಎಲ್ ಕಾರ್ಡ್ ತಲಪಿಸುವಂತೆ ಬೆಂಗಳೂರು ಡಿಸಿಗೆ ಸೂಚನೆ ನೀಡಿದರು.

ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಸಹಾಯ ಮಾಡಿದ ಬಗ್ಗೆ ಮಾತನಾಡಿದ ವೃದ್ಧೆ ಗೌರಿ, ನಾವು ಯಲಹಂಕ ನ್ಯೂ ಟೌನ್ ನಿಂದ ಬಂದಿದ್ದೇವೆ. ನಿನ್ನೆ ನಮ್ಮ ಕಡೆ ಬಂದಿದ್ರು ಗೊತ್ತಾಗಲಿಲ್ಲ. ಬೆಳಗ್ಗೆ ಟಿವಿ9 ನ್ಯೂಸ್ ಕೇಳಿ ಇಲ್ಲಿಗೆ ಬಂದೆ. ಡಿಕೆ ಸಾಹೇಬರು ಮನೆಗೆ ಕಾರ್ಡ್ ತಲುಪಿಸಲಾಗುತ್ತೆ ಎಂದಿದ್ದಾರೆ. ನಮಗೆ ಯಾರು ಸಹಾಯ ಮಾಡಿರಲಿಲ್ಲ. ಈಗ ಸ್ವಲ್ಪ ಸಹಾಯವಾಯ್ತು ಎಂದು ಸಂತಸ ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on