‘ಕಾಣಿಸಿದ್ದು ಅಹಂ ಮಾತ್ರ’; ಒಂದು ವಾರದ ಲೆಕ್ಕ ಕೊಟ್ಟ ಕಿಚ್ಚ ಸುದೀಪ್

‘ಕಾಣಿಸಿದ್ದು ಅಹಂ ಮಾತ್ರ’; ಒಂದು ವಾರದ ಲೆಕ್ಕ ಕೊಟ್ಟ ಕಿಚ್ಚ ಸುದೀಪ್

ರಾಜೇಶ್ ದುಗ್ಗುಮನೆ
|

Updated on: Jan 06, 2024 | 2:33 PM

‘ಈ ವಾರ ಮನೆಯಲ್ಲಿ ಕಾಣಿಸಿದ್ದು ಅಹಂ ಮಾತ್ರ. ನನ್ನ ತಟ್ಟೆಯಲ್ಲಿ ಊಟ ಇಲ್ಲ ಅಂದ್ರೂ ತೊಂದರೆ ಇಲ್ಲ. ಪಕ್ಕದವರು ಊಟ ಮಾಡಬಾರದು ಎಂಬಂತಿತ್ತು’ ಎಂದಿದ್ದಾರೆ ಸುದೀಪ್.

ಈ ವಾರ ನಾನಾ ರೀತಿಯ ಟಾಸ್ಕ್​ಗಳನ್ನು ಬಿಗ್ ಬಾಸ್ ನೀಡಿದರು. ಇದು ವಿನ್ನಿಂಗ್ ಅಮೌಂಟ್​ ಮೇಲೆ ನೇರ ಪ್ರಭಾವ ಬೀರಿದೆ. ಈ ಬಗ್ಗೆ ವೀಕೆಂಡ್ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ (Sudeep) ಅವರು ಮಾತನಾಡಿದ್ದಾರೆ. ಬೊರ್ಡ್ ತೆಗೆದುಕೊಳ್ಳುವಾಗ ಸ್ಪರ್ಧಿಗಳು ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದು ಅನೇಕರ ಆರೋಪ. ಈ ಆರೋಪವನ್ನು ಮನೆ ಮಂದಿ ಒಪ್ಪಿದರು. ‘ಈ ವಾರ ಮನೆಯಲ್ಲಿ ಕಾಣಿಸಿದ್ದು ಅಹಂ ಮಾತ್ರ. ನನ್ನ ತಟ್ಟೆಯಲ್ಲಿ ಊಟ ಇಲ್ಲ ಅಂದ್ರೂ ತೊಂದರೆ ಇಲ್ಲ. ಪಕ್ಕದವರು ಊಟ ಮಾಡಬಾರದು ಎಂಬಂತಿತ್ತು’ ಎಂದಿದ್ದಾರೆ ಸುದೀಪ್. ಇಂದು (ಜನವರಿ 6) ಈ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ