Loading video

ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶ; ಹಾರಿಕೆ ಉತ್ತರ ನೀಡಿದ ಡಿಕೆ ಶಿವಕುಮಾರ್

|

Updated on: Oct 08, 2024 | 2:46 PM

ಅಸಲಿಗೆ ಮೊದಲ ಕೆಲ ಸುತ್ತಿನ ಮತ ಎಣಿಕೆಯಲ್ಲಿ ಭಾರೀ ಮುಂದಿದ್ದ ಕಾಂಗ್ರೆಸ್ ನಂತರದ ಸುತ್ತುಗಳ ಎಣಿಕೆಯಲ್ಲಿ ಹಿಂದೆ ಬಿದ್ದು ಸೋಲಿನ ಅಂಚನ್ನು ತಲುಪಿದೆ ಮತ್ತು ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರೋದು ಹೆಚ್ಚುಕಡಿಮೆ ಖಚಿತವಾಗಿದೆ. ಮುಖ ಉಳಿಸಿಕೊಳ್ಳಲು ಶಿವಕುಮಾರ್ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ರಾಯಚೂರು: ಜಿಲ್ಲೆಯ ಪ್ರವಾಸದಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾದ ಹಿನ್ನಡೆಯ ಬಗ್ಗೆ ಹಾರಿಕೆಯ ಉತ್ತರ ನೀಡಿದರು. ಅಲ್ಲಿ ಮತಗಳ ಎಣಿಕೆ ಜಾರಿಯಲ್ಲಿದೆ, ಎಲ್ಲ ಕ್ಷೇತ್ರಗಳ ಫಲಿತಾಂಶ ಮೂರು ಗಂಟೆಯವರೆಗೆ ಹೊರಬೀಳಲಿದೆ, ಆಗ ತಾನು ಸ್ಪಷ್ಟವಾದ ಹೇಳಿಕೆ ನೀಡಬಹುದು ಎಂದು ಶಿವಕುಮಾರ್ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ