ದರ್ಶನ್ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಜಾಮೀನಿಗಾಗಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸದ್ಯದಲ್ಲೇ ನಡೆಯಲಿದೆ. ಹಲವು ಬಾರಿ ಅವರ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿತ್ತು. ಈಗಲಾದರೂ ಜಾಮೀನು ಸಿಗಬಹುದಾ ಎಂಬ ಕೌತುಕ ಅವರ ಆಪ್ತರಲ್ಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆಗಿರುವ ದರ್ಶನ್ ಮತ್ತು ಎ1 ಪವಿತ್ರಾ ಅವರ ಅರ್ಜಿ ವಿಚಾರಣೆ ಕೂಡ ಇಂದು (ಅ.8) ನಡೆಯಲಿದೆ.
ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹಾಗಿದ್ದರೂ ಕೂಡ ಅವರು ಚಿಕಿತ್ಸೆ ಪಡೆದಿಲ್ಲ. ದರ್ಶನ್ ಮೊಂಡುತನದಿಂದ ಅಧಿಕಾರಿಗಳಿಗೆ ಸಮಸ್ಯೆ ಆಗಿದೆ. ಹಾಗಾಗಿ ದರ್ಶನ್ ಅನಾರೋಗ್ಯ ಮತ್ತು ಚಿಕಿತ್ಸೆ ಬಗ್ಗೆ ಸಮಗ್ರ ವರದಿಯನ್ನು ವಿಮ್ಸ್ ವೈದ್ಯರಿಂದ ಜೈಲಾಧಿಕಾರಿಗಳು ಕೇಳಿದ್ದಾರೆ. ಜಾಮೀನು ಪಡೆಯಲು ದರ್ಶನ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ಜಾಮೀನು ಸಿಕ್ಕರೆ ಬೆಂಗಳೂರಿಗೆ ಬಂದು ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ದರ್ಶನ್ ತೀರ್ಮಾನಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

