ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್, ರುದ್ರಾಕ್ಷಿಮಾಲೆ ಹಿಡ್ದು ಜಪ
ಡಿಕೆ ಶಿವಕುಮಾರ್ ಅವರಿಗೆ ದೇವ ಮೇಲೆ ಅಪಾರ ನಂಬಿಕೆ ಇದೆ. ಅವರು ಪ್ರತಿದಿನ ದೇವರಿಗೆ ನಮಸ್ಕಾರ ಮಾಡದೆ ಮನೆಯಿಂದ ಹೊರ ಬರುವುದಿಲ್ಲ. ಯಾವುದೇ ದೊಡ್ಡ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಅವುಗಳು ಯಶಸ್ವಿಯಾಗಲಿದೆ ಎಂದು ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಅದರಂತೆ ಇದೀಗ ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶದ ಯಶಸ್ವಿಗೆ ಡಿಕೆ ಶಿವಕುಮಾರ್ ಅವರೇ ಖುದ್ದು ಶಿವಲಿಂಗ ಪೂಜೆ ಮಾಡಿದ್ದಾರೆ.
ಬೆಳಗಾವಿ, (ಜನವರಿ 19): ಗಾಂಧಿ ಭಾರತ ಸಮಾವೇಶ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದು, ಕಾರ್ಯಕ್ರಮ ಸಕಲ ಸಿದ್ಧತೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಕಾರ್ಯಕ್ರಮ ಯಶಸ್ವಿಗೆ ಡಿಕೆಶಿ ದೇವರ ಮೊರೆಹೋಗಿದ್ದಾರೆ. ಇಂದು (ಜನವರಿ 19) ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಡಿಕೆಶಿ ವಿಶೇಷ ಪೂಜೆ ಸಲ್ಲಿಸಿದರು. ಶರ್ಟ್ ಬಿಚ್ಚಿ ಶಲ್ಯವಸ್ತ್ರ ಧರಿಸಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.