ಇಂಡಿಯ ಇನ್ನು ಭಾರತ್? ರಿಜರ್ವ್ ಬ್ಯಾಂಕ್ ಇಂಡಿಯಾ ಗವರ್ನರ್ ಸಹಿಗೆ ಬೆಲೆ ಇಲ್ಲದಂತೆ ಮಾಡುತ್ತಿದೆ ಬಿಜೆಪಿ ಸರ್ಕಾರ: ಡಿಕೆ ಶಿವಕುಮಾರ್
ನಂತರ ಅವರು ತಮ್ಮ ಪರ್ಸ್ ನಿಂದ ರೂ. 500 ರ ನೋಟೊಂದನ್ನು ಹೊರತೆಗೆದು ಅದರ ಮೇಲಿನ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಸಹಿ ತೋರಿಸು ಅವರ ಸಹಿಗೆ ಬೆಲೆ ಇಲ್ಲದಂತೆ ಮಾಡುವ ಹುನ್ನಾರಕ್ಕಿಳಿದಿದೆಯಲ್ಲ ಬಿಜೆಪಿ ಸರ್ಕಾರ ಅಂತ ಹೇಳಿದರು. ಮುಂದುವರಿದು ಮಾತಾಡಿದ ಶಿವಕುಮಾರ್ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು ಅವರು ರಿಜರ್ವ್ ಬ್ಯಾಂಕ್ ಆಫ್ ಭಾರತ್ ಅಂತ ಬದಲಾಯಿಸುತ್ತಾರೆಯೇ ಅಂತ ಪ್ರಶ್ನಿಸಿದರು.
ರಾಮನಗರ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂಡಿಯವನ್ನು ರಿಪಬ್ಲಿಕ್ ಆಫ್ ಭಾರತ್ (Republic of Bharat) ಅಂತ ಮರುನಾಮಕರಣ ಮಾಡಹೊರಟಿರುವ ಕೇಂದ್ರ ಸರ್ಕಾರದ ಧೋರಣೆಯನ್ನು (Union Government) ಗೇಲಿ ಮಾಡಿದರು. ಬಿಜೆಪಿಯವರಿಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯ ಅಂತ ಹೆಸರಿಟ್ಟಿರುವುದು ಭೀತಿ ಮೂಡಿಸಿದೆ. ತಮ್ಮೆದುರು ಕಾಣುತ್ತಿರುವ ಸೋಲಿನ ಚಿತ್ರಣವನ್ನು ಸಹಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಶಿವಕುಮಾರ್ ಹೇಳಿದರು. ನಂತರ ಅವರು ತಮ್ಮ ಪರ್ಸ್ ನಿಂದ ರೂ. 500 ರ ನೋಟೊಂದನ್ನು ಹೊರತೆಗೆದು ಅದರ ಮೇಲಿನ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಸಹಿ ತೋರಿಸು ಅವರ ಸಹಿಗೆ ಬೆಲೆ ಇಲ್ಲದಂತೆ ಮಾಡುವ ಹುನ್ನಾರಕ್ಕಿಳಿದಿದೆಯಲ್ಲ ಬಿಜೆಪಿ ಸರ್ಕಾರ ಅಂತ ಹೇಳಿದರು. ಮುಂದುವರಿದು ಮಾತಾಡಿದ ಶಿವಕುಮಾರ್ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು ಅವರು ರಿಜರ್ವ್ ಬ್ಯಾಂಕ್ ಆಫ್ ಭಾರತ್ ಅಂತ ಬದಲಾಯಿಸುತ್ತಾರೆಯೇ ಅಂತ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ