Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧಿ ಬಜಾರ್ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿದ ಡಿಸಿಎಂ ಡಿಕೆ ಶಿವಕುಮಾರ್

ಗಾಂಧಿ ಬಜಾರ್ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿದ ಡಿಸಿಎಂ ಡಿಕೆ ಶಿವಕುಮಾರ್

Vinayak Hanamant Gurav
| Updated By: ಸಾಧು ಶ್ರೀನಾಥ್​

Updated on: Aug 19, 2023 | 4:38 PM

DCM DK Shivakumar: ಬೆಳಗ್ಗೆಯಿಂದ ಅಧಿಕೃತವಾಗಿ ಸಿಟಿ ರೌಂಡ್ಸ್ ನಲ್ಲಿರುವ ಉಪ ಮುಖ್ಯಮಂತ್ರಿ ಶಿವಕುಮಾರ್ , ​​​ಗಾಂಧಿ ಬಜಾರ್ ರಸ್ತೆಯಲ್ಲಿ ನಡೆದಿರುವ ಕಾಮಗಾರಿ ವೀಕ್ಷಣೆ ಮಾಡಿದರು. ಆ ವೇಳೆ ಬೀದಿ ಬದಿ ವ್ಯಾಪಾರಸ್ಥರೊಂದಿಗೆ ಚರ್ಚೆ ನಡೆಸಿದರು. ಬೀದಿ ಬದಿ ವ್ಯಾಪಾರಸ್ಥರು ಡಿಸಿಎಂ ಎದುರು ತಮ್ಮ ಸಮಸ್ಯೆಗಳನ್ನ ಹೇಳಿಕೊಂಡರು. ನಂತರ ಸೀದಾ ವಿದ್ಯಾರ್ಥಿ ಭವನಕ್ಕೆ ಭೇಟಿ ಕೊಟ್ಟರು. ಅದಕ್ಕೂ ಮುನ್ನ ಚೇಪೆಕಾಯಿ ಹಣ್ಣು ಸವಿದರು. ಡಿಸಿಎಂಗೆ ಕಾಮಗಾರಿ ಕುರಿತಂತೆ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು. 

ರಾಜಧಾನಿ ಬೆಂಗಳೂರು (Bangalore) ಉಸ್ತುವಾರಿ ಹೊತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಸಂಜೆ ಗಾಂಧಿ ಬಜಾರ್ ನಲ್ಲಿರುವ ವಿದ್ಯಾರ್ಥಿ ಭವನಕ್ಕೆ (Gandhi Bazar Vidyarthi Bhawan) ತೆರಳಿ, ಮಸಾಲೆ ದೋಸೆ (masala dose) ಸವಿದರು. ಬೆಳಗ್ಗೆಯಿಂದ ಅಧಿಕೃತವಾಗಿ ಸಿಟಿ ರೌಂಡ್ಸ್ ನಲ್ಲಿರುವ ಉಪ ಮುಖ್ಯಮಂತ್ರಿ ಶಿವಕುಮಾರ್ (DCM DK Shivakumar), ​​​ಗಾಂಧಿ ಬಜಾರ್ ರಸ್ತೆಯಲ್ಲಿ ನಡೆದಿರುವ ಕಾಮಗಾರಿ ವೀಕ್ಷಣೆ ಮಾಡಿದರು. ಆ ವೇಳೆ ಬೀದಿ ಬದಿ ವ್ಯಾಪಾರಸ್ಥರೊಂದಿಗೆ ಚರ್ಚೆ ನಡೆಸಿದರು. ಬೀದಿ ಬದಿ ವ್ಯಾಪಾರಸ್ಥರು ಡಿಸಿಎಂ ಎದುರು ತಮ್ಮ ಸಮಸ್ಯೆಗಳನ್ನ ಹೇಳಿಕೊಂಡರು. ನಂತರ ಸೀದಾ ವಿದ್ಯಾರ್ಥಿ ಭವನಕ್ಕೆ ಭೇಟಿ ಕೊಟ್ಟರು. ಅದಕ್ಕೂ ಮುನ್ನ ಚೇಪೆಕಾಯಿ ಹಣ್ಣು ಸವಿದರು. ಡಿಸಿಎಂಗೆ ಕಾಮಗಾರಿ ಕುರಿತಂತೆ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ