ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ವಂಚಿತರ ದೂರು-ದುಮ್ಮಾನ ಆಲಿಸಿದ ಡಿಸಿಎಂ ಡಿಕೆ ಶಿವಕುಮಾರ್

|

Updated on: Aug 12, 2023 | 3:53 PM

ಇವತ್ತು ನಗರದ ಶಿವರಾಮ ಕಾರಂತ ಬಡಾವಣೆಗೆ ಭೇಟಿ ನೀಡಿದ ಶಿವಕುಮಾರ್ ಅಲ್ಲಿಯ ನಿವಾಸಿಗಳಿಂದ ಎಲ್ಲ ಸ್ವೀಕರಿಸಿದರು. ಆದರೆ, ತಮಗೆ ಹಾಕಿದ ಹಾರವನ್ನು ತಮ್ಮ ಪಕ್ಕದಲಿದ್ದ ಹಿರಿಯ ನಿವಾಸಿಯೊಬ್ಬರು ಕೊರಳಿಗೆ ಹಾಕಿ ಅವರ ಬೆನ್ನು ತಟ್ಟಿದರು. ಯಜಮಾನರಿಗೆ ಹೇಗೆ ರಿಯಾಕ್ಟ್ ಮಾಡಬೇಕೆಂದು ಗೊತ್ತಾಗದೆ ನಕ್ಕುಬಿಟ್ಟರು!

ಬೆಂಗಳೂರು: ಹಾರ ತುರಾಯಿ ಸನ್ಮಾನ ಬೇಡ ಅಂತೇನೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿಲ್ಲ, ಹಾಗೆ ಹೇಳಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಮಾಜಿ ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ (Basavaraj Bommai). ಆದರೆ ಶಿವಕುಮಾರ್ ಹಾರ ಹಾಕಿಸಿಕೊಳ್ಳುತ್ತಾರೆ, ಬೋಕೆ ಸ್ವೀಕರಿಸುತ್ತಾರೆ, ಶಾಲು ಹೊದೆಸಿಕೊಳ್ಳುತ್ತಾರೆ ಮತ್ತು ಆಗಾಗ ಪೇಟವನ್ನೂ ಇರಿಸಿಕೊಳ್ಳುತ್ತಾರೆ. ಆಗಾಗ ಅಂತ ಯಾಕೆ ಹೇಳಬೇಕಾಗಿದೆಯೆಂದರೆ, ನಿನ್ನೆ ಬೆಳಗಾವಿಯ ಅಥಣಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ಅವರು ಸಾಮಾನ್ಯವಾಗಿ ತಾವು ಪೇಟ ಅಥವಾ ಟೋಪಿ ಹಾಕಿಸಿಕೊಳ್ಳುವುದಿಲ್ಲ ಅಂತ ಹೇಳಿದ್ದರು. ಇವತ್ತು ನಗರದ ಶಿವರಾಮ ಕಾರಂತ ಬಡಾವಣೆಗೆ (Shivaram Karanth Layout) ಭೇಟಿ ನೀಡಿದ ಶಿವಕುಮಾರ್ ಅಲ್ಲಿಯ ನಿವಾಸಿಗಳಿಂದ ಎಲ್ಲ ಸ್ವೀಕರಿಸಿದರು. ಆದರೆ, ತಮಗೆ ಹಾಕಿದ ಹಾರವನ್ನು ತಮ್ಮ ಪಕ್ಕದಲಿದ್ದ ಹಿರಿಯ ನಿವಾಸಿಯೊಬ್ಬರು ಕೊರಳಿಗೆ ಹಾಕಿ ಅವರ ಬೆನ್ನು ತಟ್ಟಿದರು. ಪಾಪ, ಆ ಯಜಮಾನರಿಗೆ ಹೇಗೆ ರಿಯಾಕ್ಟ್ ಮಾಡಬೇಕೆಂದು ಗೊತ್ತಾಗದೆ ನಕ್ಕುಬಿಟ್ಟರು! ನಂತರ ಶಿವಕುಮಾರ್ ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ವಂಚಿತರ ಜೊತೆ ಸಮಾಲೋಚನೆ ನಡೆಸಿದರು. ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್ ಹಾಗೂ ಇತರ ಅಧಿಕಾರಿಗಳು ಡಿಸಿಎಂ ಜೊತೆಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ