Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗರದಲ್ಲಿ ರಾತ್ರಿ ಜೋರು ಮಳೆ, ಬಿಬಿಎಂಪಿ ವಾರ್ ರೂಮ್ ಗೆ ಧಾವಿಸಿ ಸ್ಥಿತಿಗತಿ ಅವಲೋಕಿಸಿದ ಡಿಕೆ ಶಿವಕುಮಾರ್

ನಗರದಲ್ಲಿ ರಾತ್ರಿ ಜೋರು ಮಳೆ, ಬಿಬಿಎಂಪಿ ವಾರ್ ರೂಮ್ ಗೆ ಧಾವಿಸಿ ಸ್ಥಿತಿಗತಿ ಅವಲೋಕಿಸಿದ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 07, 2023 | 11:14 AM

ಮಳೆ ಇಲ್ಲದೆ ಕಂಗೆಟ್ಟಿದ್ದ ನಗರದಲ್ಲಿ ಮಳೆ ಸುರಿಯುತ್ತಿರೋದು ಸಂತಸ ನೀಡಿದರೂ ನಗರದ ಯಾವುದೇ ಭಾಗದಲ್ಲಿ ಟ್ರಾಫಿಕ್, ಮರಗಳ ಉರುಳುವಿಕೆ, ರಸ್ತೆಗಳಲ್ಲಿ ನೀರು ಮೊದಲಾದ ಸಮಸ್ಯೆಗಳನ್ನು ಖುದ್ದು ಸ್ಥಳಗಳಲ್ಲಿ ಹಾಜರಿದ್ದು ನಿಗಾ ವಹಿಸುವಂತೆ ಜಂಟಿ ಕಮೀಶನರ್, ಕಮೀಶನರ್ ಮತ್ತು ಇಂಜಿನೀಯರ್ ಗಳಿಗೆ ಸೂಚನೆ ನೀಡಲಾಗಿದೆ ಅಂತ ಶಿವಕುಮಾರ್ ಹೇಳಿದರು.

ಬೆಂಗಳೂರು: ನಗರದಲ್ಲಿ ಮಳೆಯಾದರೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ (Bengaluru Urban Development minister) ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ. ಸೋಮವಾರ ರಾತ್ರಿ ನಗರನದಲ್ಲಿ ಧೋ ಅಂತ ಮಳೆ ಸುರಿಯಲಾರಂಭಿಸಿದಾಗ ಅವರು ನೇರವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ ರೂಮ್ ಗೆ (BBMP war room) ಧಾವಿಸಿದರು. ಪಾಲಿಕೆಯ ಎಲ್ಲ ವಲಯಗಳಲ್ಲಿ ಸ್ಥಿತಿ ಹೇಗಿದೆ ಅನ್ನೋದನ್ನು ಆಯಾ ವಲಯದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ರಾತ್ರಿ ಸುರಿದಿದ್ದು ಭಾರೀ ಮಳೆ, ಆದರೆ ನಗರದಲ್ಲಿ ಚಿಕ್ಕ ಪ್ರಮಾಣದ ಮಳೆ ಸುರಿದರೂ ರಸ್ತೆಗಳು ಜಲಾವೃತಗೊಳ್ಳುತ್ತವೆ, ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ವಲಯಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಮಳೆ ಇಲ್ಲದೆ ಕಂಗೆಟ್ಟಿದ್ದ ನಗರದಲ್ಲಿ ಮಳೆ ಸುರಿಯುತ್ತಿರೋದು ಸಂತಸ ನೀಡಿದರೂ ನಗರದ ಯಾವುದೇ ಭಾಗದಲ್ಲಿ ಟ್ರಾಫಿಕ್, ಮರಗಳ ಉರುಳುವಿಕೆ, ರಸ್ತೆಗಳಲ್ಲಿ ನೀರು ಮೊದಲಾದ ಸಮಸ್ಯೆಗಳನ್ನು ಖುದ್ದು ಸ್ಥಳಗಳಲ್ಲಿ ಹಾಜರಿದ್ದು ನಿಗಾ ವಹಿಸುವಂತೆ ಜಂಟಿ ಕಮೀಶನರ್, ಕಮೀಶನರ್ ಮತ್ತು ಇಂಜಿನೀಯರ್ ಗಳಿಗೆ ಸೂಚನೆ ನೀಡಲಾಗಿದೆ ಅಂತ ಹೇಳಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವರು ಮುತುವರ್ಜಿ ವಹಿಸಿರೋದು ಸ್ವಾಗತಾರ್ಹ, ಅದರೆ ಈ ಎಲ್ಲ ಸಮಸ್ಯೆಗಳಿಗೆ ಇರುವ ಮೂಲಕಾರಣಗಳ ನಿವಾರಣೆಯಾಗದ ಹೊರತು ಸ್ಥಿತಿ ಸುಧಾರಣೆಯಾಗಲಾರದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 07, 2023 11:14 AM