ಮಧ್ಯಪ್ರದೇಶ: ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಬೈಕ್ ಓಡಿಸುತ್ತಿದ್ದ ವ್ಯಕ್ತಿ ಹಾವು ಕಡಿತದಿಂದ ಸಾವು

Updated on: Jul 16, 2025 | 12:37 PM

ಕುತ್ತಿಗೆಗೆ ನಾಗರಹಾವನ್ನು ಸುತ್ತಿಕೊಂಡು ಬೈಕ್ ಓಡಿಸುತ್ತಿದ್ದ ವ್ಯಕ್ತಿ ಹಾವು ಕಡಿತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ದೀಪಕ್ ಮಹಾವರ್ ಎಂದು ಗುರುತಿಸಲಾಗಿದೆ. ಘಟನೆ ನಡೆಯುವ ಮೊದಲು ವ್ಯಕ್ತಿಯೊಬ್ಬರು ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಓಡಾಡುತ್ತಿರುವ ವಿಡಿಯೋವನ್ನು ರೆಕಾರ್ಡ್​ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಗುನಾ, ಜುಲೈ 16: ಕುತ್ತಿಗೆಗೆ ನಾಗರಹಾವನ್ನು ಸುತ್ತಿಕೊಂಡು ಬೈಕ್ ಓಡಿಸುತ್ತಿದ್ದ ವ್ಯಕ್ತಿ ಹಾವು ಕಡಿತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ದೀಪಕ್ ಮಹಾವರ್ ಎಂದು ಗುರುತಿಸಲಾಗಿದೆ. ಘಟನೆ ನಡೆಯುವ ಮೊದಲು ವ್ಯಕ್ತಿಯೊಬ್ಬರು ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಓಡಾಡುತ್ತಿರುವ ವಿಡಿಯೋವನ್ನು ರೆಕಾರ್ಡ್ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಜೆಪಿ ಕಾಲೇಜಿನಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿದ್ದ ದೀಪಕ್, ಹಾವುಗಳನ್ನು ರಕ್ಷಿಸುವಲ್ಲಿ ಹೆಸರುವಾಸಿಯಾಗಿದ್ದರು. ಇಲ್ಲಿಯವರೆಗೆ ಸಾವಿರಾರು ಹಾವುಗಳನ್ನು ರಕ್ಷಿಸಿದ್ದರು.

ಘಟನೆ ದಿನ ದೀಪಕ್ ಮಕ್ಕಳನ್ನು ಶಾಲೆಗೆ ಬಿಡುವಾಗ ಹಾರದಂತೆ ಕುತ್ತಿಗೆಗೆ ನಾಗರಹಾವನ್ನು ಸುತ್ತಿಕೊಂಡಿದ್ದರು.ಹಾವು ಇದ್ದಕ್ಕಿದ್ದಂತೆ ಅವರನ್ನು ಕಚ್ಚಿತ್ತು. ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಸಮಯದಲ್ಲಿ ಪ್ರಾಣ ಬಿಟ್ಟಿದ್ದಾರೆ. ದೀಪಕ್ ಅವರ ಇಬ್ಬರು ಪುತ್ರರಾದ ರೌನಕ್ (12) ಮತ್ತು ಚಿರಾಗ್ (14) ಅವರನ್ನು ಅಗಲಿದ್ದಾರೆ, ಅವರು ಈಗ ಅನಾಥರಾಗಿದ್ದಾರೆ. ಅವರ ಪತ್ನಿ ಮೊದಲೇ ನಿಧನರಾಗಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ