ಮತ್ತೊಂದು ಇನ್ಸ್ಟಾಗ್ರಾಮ್ ಲವ್-ಧೋಕಾ, 25 ವರ್ಷದ ಯುವಕನಿಗೆ ಸಿಕ್ಕಿದ್ದು ಮೂರು ಮಕ್ಕಳ ತಾಯಿ!
ಆನ್ಲೈನ್ ಲವ್ ಬಹಳಷ್ಟು ಎಡವಟ್ಟುಗಳಿಗೆ ಕಾರಣವಾಗುತ್ತಿದೆ. ಮೊನ್ನೆ ಮಂಡ್ಯದಲ್ಲಿ ಒಬ್ಬ ವಿವಾಹಿತ ಮಹಿಳೆಯ ಕೊಲೆ ನಡೆದಿದೆ. ಕೋಲಾರದ ನವನೀತ್ನಿಗೆ ಅಪೂರ್ವ ತನಗಿಂತ 10 ವರ್ಷ ದೊಡ್ಡೋಳು ಅನ್ನೋದು ಗಮನಕ್ಕೆ ಬರಲೇ ಇಲ್ಲವೇ? ನವನೀತ್ನನ್ನು ಹುಡುಕಿಕೊಂಡು ಆಕೆ ದ್ವಾರಸಂದ್ರಕ್ಕೂ ಬಂದಿದ್ದಾಳೆ ಮತ್ತು ಅವನೊಂದಿಗೆ ಹಾಸಿಗೆಯನ್ನೂ ಶೇರ್ ಮಾಡಿದ್ದಾಳೆ. ತನ್ನಕ್ಕ ಮತ್ತು ಭಾವನಿಗೆ ಗೊತ್ತಾಗುವ ವಿಷಯ 25 ವರ್ಷದ ಯುವಕನಿಗೆ ಗೊತ್ತಾಗಲ್ಲವೇ?
ಚಿಕ್ಕಮಗಳೂರು, ಜುಲೈ 16: ಇದು ಖಂಡಿತ ಲವ್ ಸ್ಟೋರಿ ಅಲ್ಲ, ಈ ಯುವಕ ಹೇಳೋದನ್ನೇ ನಂಬೋದಾದರೆ ಇದೊಂದು ಮೋಸದ ಕತೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ದ್ವಾರಸಂದ್ರ ಗ್ರಾಮದ 25-ವರ್ಷ ವಯಸ್ಸಿನ ನಿವಾಸಿ ನವನೀತ್ (Navneet) ಹೆಸರಿನ ಯುವಕ ಬೇಸ್ತು ಬಿದ್ದಿದ್ದಾನೆ. ಅವನು ತನ್ನ ತಪ್ಪಿಗೆ ತಾನೇ ದೂಷಿಸಿಕೊಳ್ಳಬೇಕು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಅಪೂರ್ವ (35) ಹೆಸರಿನ ಮಹಿಳೆ ಜೊತೆ ಇವನಿಗೆ ಇನ್ಸ್ಟಾಗ್ರಾಮ್ ಲವ್ ಆಗಿದೆ. ಆಕೆ ಮದುವೆಯಾಗಿರೋ ಇವನಿಂದ ಮುಚ್ಚಿಟ್ಟಿದ್ದಾಳೆ. ಅಪೂರ್ವಳನ್ನು ಹುಡಕಿಕೊಂಡು ಅವಳ ಊರಿಗೆ ಹೋದಾಗಲೇ ನವನೀತ್ಗೆ ಆಕೆ ವಿವಾಹಿತೆ ಮತ್ತು ಮೂರು ಮಕ್ಕಳ ತಾಯಿ ಅನ್ನೋದು ಗೊತ್ತಾಗಿದೆ. ಈಗ ನಮ್ಮ ವರದಿಗಾರನ ಮುಂದೆ ಗೋಳು ಹೇಳಿಕೊಳ್ಳುತ್ತಿದ್ದಾನೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಬಟನ್ ಚಾಕು ತರಿಸಿಕೊಂಡು ಶಿಫಾಳ ಹತ್ಯೆ: ತನಿಖೆಯಲ್ಲಿ ಲವ್ ಸ್ಟೋರಿ ರಿವೀಲ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

