ಮನೆ ಕಟ್ಟಿಸಿಕೊಟ್ಟಿಲ್ಲ, ಚೆಕ್ ಬೌನ್ಸ್ ಆಗಿದೆ: ಕೆಜಿಎಫ್ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಚಿಕ್ಕಪೇಟೆಯ ನಿವಾಸಿಗಳು ವಿಧಾನಸಭಾ ಚುನಾವಣೆಯಲ್ಲಿ ಕೆಜಿಎಫ್ ಬಾಬು ನೀಡಿದ್ದ ಭರವಸೆಗಳನ್ನು ಈಡೇರಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಮನೆ ಕಟ್ಟಿಸಿಕೊಡುವ, ಸಿಲಿಂಡರ್ ಮತ್ತು ಚೆಕ್ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಈ ಭರವಸೆಗಳು ಈಡೇರದಿರುವುದರಿಂದ ನಿರಾಶರಾದ ನಿವಾಸಿಗಳು ಬೀದಿಗೆ ಬಂದಿದ್ದಾರೆ. ಕೆಜಿಎಫ್ ಬಾಬು ನೀಡಿದ್ದ ಚೆಕ್ ಬೌನ್ಸ್ ಆಗಿದೆ ಎಂದೂ ಆರೋಪಿಸಲಾಗಿದೆ.
ಬೆಂಗಳೂರು, ಜುಲೈ 16: ಚಿಕ್ಕಪೇಟೆ ನಿವಾಸಿಗಳು ಬುಧವಾರ (ಜು.16) ಕೆಜಿಎಫ್ ಬಾಬು ಮನೆ ಮುಂದೆ ಪ್ರತಿಭಟನೆ ನಡೆಸಿದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಜಿಎಫ್ ಬಾಬು, ಸಿಲಿಂಡರ್, ಚೆಕ್ ನೀಡುತ್ತೇನೆ ಮತ್ತು ಮನೆ ಕಟ್ಟಿಸಿ ಕೊಡುತ್ತೇನೆ ಅಂತ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದನ್ನು ಈಡೇರಿಸಿಲ್ಲ ಎಂದು ಪ್ರತಿಭಟನೆ ನಡೆಸಿದರು. ಮನೆ ಕಟ್ಟಿಸಿ ಕೊಡುತ್ತಾರೆ ಎಂಬ ಭರವಸೆಯಿಂದ, ನಮ್ಮ ಮನೆಗಳನ್ನು ಬೀಳಿಸಿದ್ದೇವೆ. ಆದರೆ, ಈಗ ಮನೆ ಕಟ್ಟಿಸಿಕೊಡುತ್ತಿಲ್ಲ. ಇದರಿಂದ ನಾವು ಬೀದಿಗೆ ಬಂದಿದ್ದೇವೆ. ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಸಿಲಿಂಡರ್ ಕೊಟ್ಟಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಇದನ್ನೂ ನೋಡಿ: ತನ್ನ ಮಗ ಮತ್ತು ಅವನ ಮಾವ ಮುಸ್ತಾಫಾ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಅಂತ ವಿವರಿಸಿದ ಕೆಜಿಎಫ್ ಬಾಬು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




