ಯಾದಗಿರಿ ಬಳಿ ನಡೆದ ಭೀಕರರ ಅಪಘಾತದಲ್ಲಿ ಬಲಿಯಾದ ವಾಜಿದ್​ರನ್ನು ನೆನೆದು ಅವರ ಊರಿನ ಜನ ಕಂಬಿನಿ ಮಿಡಿಯುತ್ತಿದ್ದಾರೆ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Aug 05, 2022 | 5:26 PM

ವಾಜಿದ್ ತಮ್ಮೂರಿನ ಜನರಿಗೆ ಬೇರೆ ಬೇರೆ ವಿಧಗಳಲ್ಲಿ ನೆರವಾಗುತ್ತಿದ್ದರಂತೆ. ಜನ ಅವರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.

ಲಿಂಗಸೂಗೂರು: ಯಾದಿಗಿರಿ (Yadgir) ನಗರಕ್ಕೆ ಹತ್ತಿರದ ಅರಕೇರಾ ಹೆಸರಿನ ಗ್ರಾಮದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ (state highway) ಕಳೆದ ರಾತ್ರಿ ಕಾರು ಮತ್ತು ಟೆಂಪೋ ನಡುವೆ ಢಿಕ್ಕಿಯಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ 7 ಸದಸ್ಯರ ಪೈಕಿ 6 ಜನ ಸ್ಥಳದಲ್ಲೇ ಮೃತರಾಗಿದ್ದಾರೆ. ಲಿಂಗಸೂಗುರಿನ ಹಟ್ಟಿಪಟ್ಟಣದ ವಾಜಿದ್ (Wajid) ಕುಟುಂಬ ಕಾರಿನಲ್ಲಿ ಪ್ರಯಾಣಿಸುತಿತ್ತು. ವಾಜಿದ್ ತಮ್ಮೂರಿನ ಜನರಿಗೆ ಬೇರೆ ಬೇರೆ ವಿಧಗಳಲ್ಲಿ ನೆರವಾಗುತ್ತಿದ್ದರಂತೆ. ಜನ ಅವರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.

Loading...
Unable to load recommendations.
Follow Us
TV9 Web

TV9 Kannada

Read More