Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಪೆ ಬೀಚ್‌ನಲ್ಲಿ ವಿಶಿಷ್ಟ ದೀಪಾವಳಿ -ಶುಭ ದೀಪಾವಳಿ! ಏನದು ಮರಳು ಶಿಲ್ಪ ಅಭಿಯಾನ?

ಮಲ್ಪೆ ಬೀಚ್‌ನಲ್ಲಿ ವಿಶಿಷ್ಟ ದೀಪಾವಳಿ -ಶುಭ ದೀಪಾವಳಿ! ಏನದು ಮರಳು ಶಿಲ್ಪ ಅಭಿಯಾನ?

ಪ್ರಜ್ವಲ್ ಅಮೀನ್​, ಉಡುಪಿ
| Updated By: ಸಾಧು ಶ್ರೀನಾಥ್​

Updated on:Nov 16, 2023 | 11:50 AM

Sand Art Deepavali: ಕೇಂದ್ರ ಸರಕಾರ ಶಿಸ್ತುಬದ್ಧವಾಗಿ ದೀಪವಾಳಿಯನ್ನು ಆಚರಿಸಬೇಕೆಂಬ ಉದ್ದೇಶದಿಂದ ಸ್ವಚ್ಛ ದೀಪಾವಳಿ, ಶುಭ ದೀಪಾವಳಿ ಆಚರಿಸಲು ನಿರ್ಧರಿಸಿದೆ. ಮಲ್ಪೆ ಭಾಗದ ಕರಾವಳಿಯ ತೀರಕ್ಕೆ ಬರುವ ಎಲ್ಲ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರಸಭೆ ಮರಳು ಶಿಲ್ಪ ರಚನೆ ಮಾಡಿದೆ.

ಪರಿಸರ ಸ್ನೇಹಿ ದೀಪಾವಳಿ (Deepavali 2023) ಆಚರಣೆಗೆ ಉಡುಪಿ ನಗರಸಭೆ ಒತ್ತು ನೀಡಿದೆ. ಹಸಿರು ಪಟಾಕಿ ( Green Fire Crackers) ಕುರಿತು ಜಾಗೃತಿ ಮೂಡಿಸಿ ಕೆಲವೊಂದು ಸ್ಥಳಗಳನ್ನು ನಿಗದಿಪಡಿಸಿ ಪಟಾಕಿ ಮಾರಾಟಕ್ಕೆ ಸೀಮಿತ ಅವಕಾಶ ಕಲ್ಪಿಸಿದೆ. ಮರಳು ಶಿಲ್ಪದ ಮೂಲಕ ನಗರಸಭೆಯ ಆಯೋಜನೆಯಲ್ಲಿ ಮಲ್ಪೆ ಬೀಚ್‌ನಲ್ಲಿ (Malpe Beach, Udupi) ದೀಪಾವಳಿ, ಶುಭ ದೀಪಾವಳಿ ಜನ ಜಾಗೃತಿ ಕಾರ್ಯಕ್ರಮ ನಡೆಯಿತು. ಶಾಸಕ ಯಶ್‌ಪಾಲ್‌ ಸುವರ್ಣ ಜನಜಾಗೃತಿಗೊಳಿಸುವ ಮರಳು ಶಿಲ್ಪವನ್ನು ಹಣತೆಯ ದೀಪವನ್ನು ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರಕಾರ ಶಿಸ್ತುಬದ್ಧವಾಗಿ ದೀಪವಾಳಿಯನ್ನು ಆಚರಿಸಬೇಕೆಂಬ ಉದ್ದೇಶದಿಂದ ಸ್ವಚ್ಛ ದೀಪಾವಳಿ, ಶುಭ ದೀಪಾವಳಿ ಆಚರಿಸಲು ನಿರ್ಧರಿಸಿದೆ. ಮಲ್ಪೆ ಭಾಗದ ಕರಾವಳಿಯ ತೀರಕ್ಕೆ ಬರುವ ಎಲ್ಲ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರಸಭೆ ಮರಳು ಶಿಲ್ಪ ರಚನೆ ಮಾಡಿದೆ. ದೇಶದ ಎಲ್ಲ ಜನರು ಪರಿಸರ ಮಾಲಿನ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಪೌರಾಯುಕ್ತ ರಾಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 11, 2023 05:14 PM