ಕುರಿ, ಮೇಕೆಯೊಂದಿಗೆ ಜಿಂಕೆಯ ಸ್ನೇಹ; ವಿಡಿಯೋ ನೋಡಿ

ಬೆಳಿಗ್ಗೆಯಿಂದ ಸಂಜೆಯವರೆಗೆ ದನಕರುಗಳು ಹಾಗೂ ಕುರಿ, ಮೇಕೆಗಳ ಜೊತೆಗೆ ಇರುವ ಜಿಂಕೆ ಮರಿಯನ್ನು ನೋಡಲು ಹಲವಾರು ಜನ ಬರುತ್ತಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಕಾಮಸಮುದ್ರದ ಮಲ್ಲೆಕುಪ್ಪ ಗ್ರಾಮದ ಬಳಿ ಕಳೆದ ಒಂದು ತಿಂಗಳಿಂದ ಜಿಂಕೆ ಮರಿ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಜಿಂಕೆ ಮನುಷ್ಯರನ್ನು ಕಂಡರೆ ಹೆದರಿ ಓಡಿಹೋಗುತ್ತದೆ. ಆದರೆ ಈ ಜಿಂಕೆ ಮರಿ ತನ್ನ ತಾಯಿಯಿಂದ ಬೇರ್ಪಟ್ಟಿದ್ದು, ಹೊಲಕ್ಕೆ ಮೇಯಲು ಹೋಗುವ ಕುರಿ, ಮೇಕೆ, ದನ ಕರುಗಳ ಜೊತೆಯಲ್ಲಿ ಆಟವಾಡಿಕೊಂಡು ಇರುತ್ತದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ದನಕರುಗಳು ಹಾಗೂ ಕುರಿ, ಮೇಕೆಗಳ ಜೊತೆಗೆ ಇರುವ ಜಿಂಕೆ ಮರಿಯನ್ನು ನೋಡಲು ಹಲವಾರು ಜನ ಬರುತ್ತಿದ್ದಾರೆ. ಅಲ್ಲದೆ ಜಿಂಕೆ ಕೂಡಾ ಬೀದಿ ನಾಯಿಗಳ ದಾಳಿಗೆ ಸಿಲುಕದಂತೆ ಮಲ್ಲೆಕುಪ್ಪ ಗ್ರಾಮಸ್ಥರು ರಕ್ಷಣೆ ಮಾಡಿ ಬರುತ್ತಿದ್ದಾರೆ.

Click on your DTH Provider to Add TV9 Kannada