India-Pakistan War Updates; ಸೇನಾ ಮುಖ್ಯಸ್ಥರು ಮತ್ತು ಸಿಡಿಎಸ್ ಜೊತೆ ರಾಜನಾಥ್ ಸಿಂಗ್ ಸುದೀರ್ಘ ಸಭೆ

Updated on: May 09, 2025 | 3:44 PM

ಗೃಹ ಸಚಿವ ಅಮಿತ್ ಶಾ ಸಹ ಇವತ್ತು ದೆಹಲಿಯಲ್ಲಿ ಬಿಎಸ್​ಎಫ್, ಸಿಆರ್​ಪಿಎಫ್ ದಳಗಳ ಡಿಜಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಾಗರಿಕರ ರಕ್ಷಣೆ, ದೇಶದ ಆಣೆಕಟ್ಟುಗಳ ರಕ್ಷಣೆ, ರಕ್ಷಣಾ ಕೆಲಸದಲ್ಲಿ ಅರೆ ಮಿಲಿಟರಿ ಪಡೆಗಳ ಬಳಕೆ ಮೊದಲಾದ ಸಂಗತಿಗಳನ್ನು ಅವರು ಚರ್ಚಿಸಲಿದ್ದಾರೆ. ಇಂಡಿಯನ್ ಪ್ರಿಮೀಯರ್ ಲೀಗ್ ಅನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿರುವುದು ಪ್ರಶಂಸನೀಯ ಕ್ರಮ.

ಬೆಂಗಳೂರು, ಮೇ 9: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಮೂವರು ಸೇನಾ ಮುಖ್ಯಸ್ಥರು (chiefs of armed forces) ಮತ್ತು ಸಿಡಿಎಸ್ ಜೊತೆ ಮಹತ್ವದ ಸಭೆ ಮತ್ತು ಸುದೀರ್ಘವಾದ ಚರ್ಚೆ ನಡೆಸಿದರು. ಪಾಕಿಸ್ತಾನ ನಿನ್ನೆಯಿಂದ ಯಾವ್ಯಾವ ನೆಲೆ ಮತ್ತು ಸ್ಥಳಗಳ ಮೇಲೆ ದಾಳಿ ನಡೆಸಿದೆ ಮತ್ತು ಅದರ ದಾಳಿಯನ್ನು ಭಾರತ ಹೇಗೆ ಎದುರಿಸಿದೆ ಅನ್ನೋದನ್ನು ಸಭೆಯಲ್ಲಿ ಅವಲೋಕಿಸಲಾಯಿತು ಎಂದ ನಮ್ಮ ದೆಹಲಿ ವರದಿಗಾರ ಹೇಳುತ್ತಾರೆ, ಪಾಕಿಸ್ತಾನ ಇವತ್ತು ಕೂಡ ದಾಳಿ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು, ಒಂದು ಪಕ್ಷ ದಾಳಿ ಮಾಡಿದರೆ ಅದಕ್ಕೆ ಹೇಗೆ ಪ್ರತ್ಯುತ್ತರ ನೀಡುವುದು, ಉತ್ತರ ಭಾರತದಲ್ಲಿ ವಾಸವಾಗಿರುವ ಜನರ ರಕ್ಷಣೆ-ಸಂಗತಿಗಳನ್ನು ಚರ್ಚಿಸಲಾಯಿತು, ಭಾರತದ ಸೇನೆ ಪಾಕ್ ಸೇನೆಗಿಂತ ಹತ್ತುಪಟ್ಟು ಬಲಿಷ್ಠ ಮತ್ತು ಅಗಾಧವಾಗಿದೆ, ಆದಾಗ್ಯೂ ರಕ್ಷಣಾ ಸಚಿವರು ಶತ್ರುರಾಷ್ಟ್ರದ ಬಲಗಳೇನು ಅನ್ನೋದನ್ನು ಚರ್ಚಿಸಿದರು.

ಇದನ್ನೂ ಓದಿ:   Khawaja Asif: ಭಾರತದಲ್ಲಿ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ‘ಎಕ್ಸ್​’ ಖಾತೆ ನಿರ್ಬಂಧ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ