ಪ್ರೇಯಸಿ ಫೋನ್ ಕರೆ ಸ್ವೀಕರಿಸದ ಕಾರಣ ಬೇಸತ್ತ ವಿವಾಹಿತ ಪ್ರಿಯಕರ ಅವಳ ಮನೆ ಮುಂದೆಯೇ ನೇಣಿಗೆ ಕೊರಳೊಡ್ಡಿದ!
ಈ ಮಹಾಶಯ ಇತ್ತೀಚಿಗೆ ಪ್ರೇಯಸಿಯೊಂದಿಗೆ ಜಗಳ ಮಾಡಿಕೊಂಡವನು ನಂತರ ರಾಜಿ ಮಾಡಿಕೊಳ್ಳಲು ಅವಳ ಮನೆ ಬಳಿ ಹೋದಾಗ ಅವಳು ಕ್ಯಾರೆ ಅಂದಿಲ್ಲ.
ಹೊಸಕೋಟೆ: ಇದು ಮೂರ್ಖತನದ ಪರಮಾವಧಿ ಮಾರಾಯ್ರೇ. ಹೊಸಕೋಟೆ (Hoskote) ತಾಲ್ಲೂಕಿನ ಡಿ ಹೊಸಹಳ್ಳಿ ಗ್ರಾಮದ ರಾಜು (Raju) ಎನ್ನುವ ವ್ಯಕ್ತಿ ವಿವಾಹಿತನಾಗಿ ಎರಡು ಮಕ್ಕಳ ತಂದೆಯಾಗಿದ್ರೂ ಬೇರೊಬ್ಬ ಹೆಂಗಸಿನ ಸಹವಾಸಕ್ಕೆ ಬಿದ್ದಿದ್ದಾನೆ. ಕಳೆದರೆಡು ವರ್ಷಗಳಿಂದ ಅವರ ನಡುವೆ ಸ್ನೇಹವಿತ್ತಂತೆ. ಈ ಮಹಾಶಯ ಇತ್ತೀಚಿಗೆ ಪ್ರೇಯಸಿಯೊಂದಿಗೆ (fiancé) ಜಗಳ ಮಾಡಿಕೊಂಡವನು ನಂತರ ರಾಜಿ ಮಾಡಿಕೊಳ್ಳಲು ಅವಳ ಮನೆ ಬಳಿ ಹೋದಾಗ ಆಕೆ ಕ್ಯಾರೆ ಅಂದಿಲ್ಲ. ಆಮೇಲೆ ಅವನು ಮಾಡಿದ ಪೋನ್ ಕರೆಗೂ ಪ್ರೇಯಸಿ ಸ್ಪಂದಿಸಿಲ್ಲ. ಇದರಿಂದ ಹತಾಷನಾದ ರಾಜು ಅವಳ ಮನೆ ಮುಂದೆಯೇ ನೇಣು ಬಿಗಿದುಕೊಂಡು ಸತ್ತಿದ್ದಾನೆ!
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos