ದೆಹಲಿ ಸ್ಫೋಟ: ಕಳೆದ ತಿಂಗಳು ನಾನೂ ಅದೇ ಸ್ಥಳದಲ್ಲಿದ್ದೆ ಎಂದ ಸಂಸದೆ
ದೆಹಲಿ ರೆಡ್ ಫೋರ್ಟ್ ಬಳಿಯ ಕಾರ್ ಬ್ಲಾಸ್ಟ್ ಸ್ಥಳದಲ್ಲಿ ಒಂದು ತಿಂಗಳ ಹಿಂದೆಯಷ್ಟೇ ಇದ್ದೆ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಇದು ಗುಪ್ತಚರ ಹಾಗೂ ವ್ಯವಸ್ಥೆಯ ವೈಫಲ್ಯ ಎಂದಿರುವ ಅವರು, 13 ಜೀವಗಳು ಬಲಿಯಾದ ಈ ಘಟನೆ ಬಗ್ಗೆ ಗೃಹ ಮತ್ತು ರಕ್ಷಣಾ ಸಚಿವಾಲಯಗಳು ಹೆಚ್ಚೆಚ್ಚು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ದಾವಣಗೆರೆ, ನವೆಂಬರ್ 12: ದೆಹಲಿ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿದ್ದು, ಒಂದು ತಿಂಗಳ ಹಿಂದಷ್ಟೇ ನಾನು ಸ್ಫೋಟ ಸಂಭವಿಸಿದ ಸ್ಥಳದಲ್ಲಿರುವ ಗೌರಿ ಶಂಕರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಹೂವು-ಹಣ್ಣು ಖರೀದಿಸಿದ ಅದೇ ಸ್ಥಳದಲ್ಲಿ ಸ್ಫೋಟ ಸಂಭವಿಸಿರುವುದು ಆತಂಕಕಾರಿ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 12, 2025 05:32 PM
