ದೆಹಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, 7 ವರ್ಷದ ಮಗು ಸಾವು, 12 ಜನರ ರಕ್ಷಣೆ
ದೆಹಲಿಯಲ್ಲಿ ಸೋಮವಾರ ರಾತ್ರಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದ್ದು, 7 ವರ್ಷದ ಮಗು ಸಾವನ್ನಪ್ಪಿದೆ, ಇದುವರೆಗೆ 12 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೆಹಲಿಯ ಬುರಾರಿಯಲ್ಲಿ ಘಟನೆ ನಡೆದಿದ್ದು, ಹೊಸದಾಗಿ ನಿರ್ಮಿಸಿದ್ದ ಕಟ್ಟಡ ಕುಸಿದಿದೆ. ಇನ್ನೂ ಹೆಚ್ಚಿನವರು ಸಿಲುಕಿರುವ ಶಂಕೆ ಇದೆ. ಐವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ದೆಹಲಿಯಲ್ಲಿ ಸೋಮವಾರ ರಾತ್ರಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದ್ದು, 7 ವರ್ಷದ ಮಗು ಸಾವನ್ನಪ್ಪಿದೆ, ಇದುವರೆಗೆ 12 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೆಹಲಿಯ ಬುರಾರಿಯಲ್ಲಿ ಘಟನೆ ನಡೆದಿದ್ದು, ಹೊಸದಾಗಿ ನಿರ್ಮಿಸಿದ್ದ ಕಟ್ಟಡ ಕುಸಿದಿದೆ. ಇನ್ನೂ ಹೆಚ್ಚಿನವರು ಸಿಲುಕಿರುವ ಶಂಕೆ ಇದೆ. ಐವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಬುರಾರಿಯ ಕೌಶಿಕ್ ಎನ್‌ಕ್ಲೇವ್‌ನಲ್ಲಿ ಸೋಮವಾರ ಸಂಜೆ 6. 30 ರ ಸುಮಾರಿಗೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದೆ. ಸಂಜೆ 6.58ಕ್ಕೆ ಘಟನೆಗೆ ಸಂಬಂಧಿಸಿದಂತೆ ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯು ಇನ್ನೂ ಜಾರಿಯಲ್ಲಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ