‘ಬಿಗ್ ಬಾಸ್ ಕಪ್ಗೆ ಹನುಮಂತ ಅರ್ಹ’; ರಜತ್ ನೇರ ಮಾತು
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರು ವಿನ್ ಆದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಅವರದ್ದು ಅದೃಷ್ಟ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಶ್ರಮ ಎಂದಿದ್ದಾರೆ. ಈ ಬಗ್ಗೆ ರಜತ್ ಅವರು ಕೂಡ ಮಾತನಾಡಿದ್ದಾರೆ. ಅವರು ಹೇಳಿದ್ದು ಏನು?
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಹಾಗೂ ತ್ರಿವಿಕ್ರಂ ಅವರು ಉತ್ತಮವಾಗಿ ಆಡಿದ್ದಾರೆ. ಇವರನ್ನೂ ಹಿಂದಿಕ್ಕಿ ಮುಂದೆ ಸಾಗಿದ್ದಾರೆ ಹನುಮಂತ ಅವರು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರ ಗೆಲುವಿನ ಬಗ್ಗೆ ರಜತ್ ಮಾತನಾಡಿದ್ದಾರೆ. ‘ಜನ ಅವನನ್ನು ಇಷ್ಟಪಡುತ್ತಾರೆ. ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದಾನೆ. ಫಿನಾಲೆ ಟಿಕೆಟ್ ಪಡೆದಿದ್ದ. ಇವನೇ ಗೆಲ್ಲೋದು ಅನ್ನೋದು ಮೊದಲೇ ಗೊತ್ತಿತ್ತು’ ಎಂದಿದ್ದಾರೆ ರಜತ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 28, 2025 09:29 AM
Latest Videos