ದೆಹಲಿಯಲ್ಲಿ ಅಪಾಯದ ಮಟ್ಟ ಮೀರಿದ ಯಮುನಾ ನದಿ; ಪರಿಹಾರ ಶಿಬಿರಗಳು ಮುಳುಗಡೆ

Updated on: Sep 04, 2025 | 7:49 PM

ಯಮುನಾ ಬಜಾರ್ ಮತ್ತು ಯಮುನಾ ಖಾದರ್ ನಂತಹ ತೀವ್ರ ಹಾನಿಗೊಳಗಾದ ಸ್ಥಳಗಳಲ್ಲಿನ ನಿವಾಸಿಗಳನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತಂಡಗಳು ಮತ್ತು ಜಿಲ್ಲಾ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಮಯೂರ್ ವಿಹಾರ್ ಹಂತದ ಬಳಿಯಿರುವ ದೆಹಲಿಯ ತಗ್ಗು ಪ್ರದೇಶಗಳಲ್ಲಿನ ಪರಿಹಾರ ಶಿಬಿರಗಳು ಇಂದು ನಿರಂತರ ಮಳೆಯ ನಂತರ ಯಮುನಾ ನದಿ ಅಪಾಯದ ಮಟ್ಟ ಮೀರಿ ಜಲಾವೃತಗೊಂಡಿವೆ. ದೆಹಲಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ.

ನವದೆಹಲಿ, ಸೆಪ್ಟೆಂಬರ್ 3: ದೆಹಲಿಯಲ್ಲಿ (Delhi Flood) ಭಾರೀ ಮಳೆಯಿಂದಾಗಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಯಮುನಾ ನದಿ (Yamuna River) ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪರಿಹಾರ ಶಿಬಿರಗಳು ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿವೆ. ಯಮುನಾ ನದಿ ಸುತ್ತಮುತ್ತಲಿನ ನೆರೆಹೊರೆಗಳಿಗೆ ನುಗ್ಗಿ ಹರಿಯುತ್ತಿದ್ದಂತೆ ಕಾಶ್ಮೀರಿ ಗೇಟ್‌ನ ಕೆಲವು ಭಾಗಗಳು ಸಹ ನೀರಿನಲ್ಲಿ ಮುಳುಗಿವೆ. ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಮೂಲಕ ಭಾರೀ ಮಳೆ ಸುರಿದಿದ್ದು, ಟ್ರಾಫಿಕ್ ಜಾಮ್ ಉಂಟಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ