ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ

ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ

ನಯನಾ ರಾಜೀವ್
|

Updated on:Oct 20, 2024 | 10:22 AM

ದೆಹಲಿಯ ರೋಹಿಣಿಯಲ್ಲಿರುವ ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ ಸಂಭವಿಸಿದೆ. ಬೆಳಗ್ಗೆ 7.50ರ ವೇಳೆಗೆ ಸ್ಫೋಟದ ಬಗ್ಗೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು, ತಕ್ಷಣವೇ ಎರಡು ಅಗ್ನಿಶಾಮಕ ವಾಹನಗಳು ಘಟನೆ ಸ್ಥಳಕ್ಕೆ ಬಂದಿದ್ದವು. ಘಟನೆಯ ಕುರಿತು ಹೆಚ್ಚಿನ ವಿವರಗಳಿಗಾಗಿ ಅಗ್ನಿಶಾಮಕ ದಳದ ತಂಡಗಳು ಪ್ರದೇಶದಲ್ಲಿ ಶೋಧವನ್ನು ಮುಂದುವರೆಸಿವೆ.

ಶಾಲೆಯ ಗೋಡೆಗೆ ಹಾನಿಯಾಗಿದೆ, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಫೋರೆನ್ಸಿಕ್ ತಂಡಗಳು ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

ಸ್ಥಳೀಯ ನಿವಾಸಿಯೊಬ್ಬರು ರೆಕಾರ್ಡ್ ಮಾಡಿದ ವೀಡಿಯೊವು ಸ್ಫೋಟದ ಸ್ಥಳದ ಸಮೀಪದಿಂದ ಹೊಗೆ ಹಬ್ಬುವುದನ್ನು ಕಾಣಬಹುದು. ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ನಾನು ಮನೆಯಲ್ಲಿದ್ದೆ ಶಬ್ದ ಕೇಳಿ ಹೊರಗೆ ಬಂದು ನೋಡಿದಾಗ ಹೊಗೆಯು ತೀವ್ರವಾಗಿ ಆವರಿಸಿತ್ತು ಎಂದಿದ್ದಾರೆ. ಚರಂಡಿ ಮಾರ್ಗವನ್ನು ಪರಿಶೀಲಿಸಲಾಗುತ್ತಿದೆ.

ಸ್ಫೋಟದ ರಭಸಕ್ಕೆ ಶಾಲೆಯ ಬಳಿ ನಿಲ್ಲಿಸಿದ್ದ ಕಾರುಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ ಮತ್ತು ಆ ಪ್ರದೇಶದಲ್ಲಿನ ಅಂಗಡಿಗಳ ಸೂಚನಾ ಫಲಕಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್) ತಂಡವನ್ನು ತನಿಖೆಗಾಗಿ ಕರೆಯಲಾಗಿದೆ. ಏತನ್ಮಧ್ಯೆ, ದೆಹಲಿ ಪೊಲೀಸರ ವಿಶೇಷ ಕೋಶದ ತಂಡವು ಈಗಾಗಲೇ ಸ್ಥಳದಲ್ಲಿದ್ದು, ಘಟನೆಯ ಕುರಿತು ತನಿಖೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Oct 20, 2024 10:22 AM