ಬಿಗ್ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಲಾಯರ್ ಜಗದೀಶ್ ಅವರ ವರ್ತನೆಯಿಂದ ಬೇಸತ್ತು ಬಿಗ್ಬಾಸ್ನಿಂದ ಎಲಿಮಿನೇಟ್ ಮಾಡಲಾಗಿದೆ. ಆದರೆ ಶನಿವಾರ ಸುದೀಪ್ ಅವರು ಜಗದೀಶ್ ಪರವಾಗಿ ಮಾತನಾಡಿದ್ದರು. ಇದೀಗ ಬಿಗ್ಬಾಸ್ ಹೊಸ ಪ್ರೋಮೋ ಪ್ರಕಾರ, ಬಿಗ್ಬಾಸ್ ವೇದಿಕೆ ಮೇಲೆ ಜಗದೀಶ್ ಅವರ ವಿಡಿಯೋ ಪ್ರಸಾರ ಮಾಡಲಾಗಿದ್ದು, ಜಗದೀಶ್ ಬಿಗ್ಬಾಸ್ ಕ್ಷಮೆ ಕೇಳಿರುವುದಲ್ಲದೆ, ತಮ್ಮನ್ನು ಮತ್ತೆ ಬಿಗ್ಬಾಸ್ಗೆ ಕರೆಸಿಕೊಳ್ಳಲು ಸಾಧ್ಯವಾ ಎಂದು ಮನವಿ ಮಾಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11ರಿಂದ ಲಾಯರ್ ಜಗದೀಶ್ ಅನ್ನು ಹೊರ ಹಾಕಲಾಗಿದೆ. ಜಗದೀಶ್, ಮನೆಯೊಳಗೆ ಬಳಸಿದ ಭಾಷೆ, ನಡೆದುಕೊಂಡ ರೀತಿ, ತೋರಿದ ನಡವಳಿಕೆಗಳಿಂದಾಗಿ ಜಗದೀಶ್ ಅನ್ನು ಹೊರಗೆ ಹಾಕಲಾಗಿದೆ. ಜಗದೀಶ್ ಮೇಲೆ ಕೈ ಮಾಡಿದ್ದಕ್ಕೆ ರಂಜಿತ್ ಸಹ ಹೊರಗೆ ಹೋಗಿದ್ದಾರೆ. ಆದರೆ ಕಲರ್ಸ್ ವಾಹಿನಿ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ ಬಿಗ್ಬಾಸ್ ವೇದಿಕೆ ಮೇಲೆ ಜಗದೀಶ್ ಕಾಣಿಸಿಕೊಂಡಿದ್ದಾರೆ. ಹೌದು, ಜಗದೀಶ್ ಮಾತನಾಡಿರುವ ವಿಡಿಯೋವನ್ನು ಸುದೀಪ್ ಪ್ರಸಾರ ಮಾಡಿದ್ದಾರೆ. ವಿಡಿಯೋನಲ್ಲಿ ತಮ್ಮ ವರ್ತನೆ ಬಗ್ಗೆ ಕ್ಷಮೆ ಕೇಳಿರುವ ಜಗದೀಶ್, ಮನೆಯ ಸದಸ್ಯರ ಬಗ್ಗೆ ಸಹ ಮಾತನಾಡಿದ್ದಾರೆ. ಸಾಧ್ಯವಾದರೆ ನನ್ನನ್ನು ವಾಪಸ್ ಕರೆಸಿಕೊಳ್ಳಿ ಎಂದು ಮನವಿ ಸಹ ಮಾಡಿದ್ದಾರೆ. ನಿನ್ನೆ ಸುದೀಪ್, ಜಗದೀಶ್ ಪರವಾಗಿ ಮಾತನಾಡಿದ್ದರು, ಈಗ ಅವರ ವಿಡಿಯೋ ಪ್ರಸಾರ ಮಾಡಿರುವುದು ನೋಡಿದರೆ ಜಗದೀಶ್ ಅನ್ನು ಮತ್ತೆ ಒಳಗೆ ಕರೆಸಿಕೊಳ್ಳುತ್ತಾರೆಯೇ ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್ ಚುನಾವಣೆ ಫಲಿತಾಂಶ: ಕಾಂಗ್ರೆಸ್ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ

