ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!

Updated on: Mar 19, 2026 | 10:38 PM

ತಾಯಿ ತನ್ನ ಮಗಳನ್ನು ಶಾಲೆಗೆ ಬಿಡಲು ಹೋದಾಗ ಬೈಕ್‌ಗಳಲ್ಲಿ ಬಂದ ದರೋಡೆಕೋರರ ಗುಂಪೊಂದು ಅವಳನ್ನು ಸುತ್ತುವರೆದು ಲೂಟಿ ಮಾಡಿತು. ಅವಳು ವಿರೋಧಿಸಿದಾಗ, ಅವರು ಅವಳ ಮೇಲೆ ಆಯುಧದಿಂದ ದಾಳಿ ಮಾಡಿದರು. ಅವರಿಂದ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಯುಧಗಳನ್ನು ತೆಗೆದು ಆಕೆಯ ಮೇಲೆ ದಾಳಿ ನಡೆಸಿದರು. ಇಷ್ಟೆಲ್ಲ ನಡೆದಿದ್ದು ಬೆಳಗ್ಗೆ ಜನರೆಲ್ಲ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗಲೇ. ಆದರೂ ಯಾರಿಗೂ ಹೆದರದ ಕಳ್ಳರು ಆಕೆಯನ್ನು ಲೂಟಿ ಮಾಡಿದ್ದಾರೆ. ಇದು ರಾಷ್ಟ್ರ ರಾಜಧಾನಿ ಸುರಕ್ಷಿತವಾಗಿಲ್ಲದಿದ್ದರೆ, ಬೇರೆಲ್ಲಿಯಾದರೂ ನಾವು ಸುರಕ್ಷತೆಯನ್ನು ಹೇಗೆ ನಿರೀಕ್ಷಿಸಬಹುದು? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ನವದೆಹಲಿ, ಮಾರ್ಚ್ 19: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಮಗಳನ್ನು ಶಾಲಾ ಬಸ್​​ಗೆ ಹತ್ತಿಸಲು ಸ್ಕೂಟಿಯಲ್ಲಿ ಬಂದಿದ್ದ ಮಹಿಳೆ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಯುವಕರು ಬೈಕ್​ಗಳಲ್ಲಿ ಬಂದು ಆಕೆಯನ್ನು ಅಡ್ಡಹಾಕಿದರು. ಆಕೆಯ ಕುತ್ತಿಗೆಯಲ್ಲಿದ್ದ ಸರ, ಕೈಯಲ್ಲಿದ್ದ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಅವರಿಂದ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಯುಧಗಳನ್ನು ತೆಗೆದು ಆಕೆಯ ಮೇಲೆ ದಾಳಿ ನಡೆಸಿದರು. ಇಷ್ಟೆಲ್ಲ ನಡೆದಿದ್ದು ಬೆಳಗ್ಗೆ ಜನರೆಲ್ಲ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗಲೇ. ಆದರೂ ಯಾರಿಗೂ ಹೆದರದ ಕಳ್ಳರು ಆಕೆಯನ್ನು ಲೂಟಿ ಮಾಡಿದ್ದಾರೆ. ಅಲ್ಲೇ ಬೈಕ್​ನಲ್ಲಿ ಹೋಗುತ್ತಿದ್ದವರು ಇದನ್ನು ನೋಡಿದರೂ ನೋಡದಂತೆ ತಮ್ಮಷ್ಟಕ್ಕೆ ಮುಂದೆ ಹೋಗಿದ್ದಾರೆ. ಇಡೀ ಘಟನೆ ಅಲ್ಲಿದ್ದ ರಸ್ತೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ದೆಹಲಿಯಲ್ಲಿ ಹಗಲು ಹೊತ್ತಿನಲ್ಲೂ ಜನರಿಗೆ ರಕ್ಷಣೆಯಿಲ್ಲವೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More