ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ; ದೆಹಲಿ ಪೊಲೀಸರಿಂದ ವಿಡಿಯೋ ಬಿಡುಗಡೆ
ಅಭಿಜೀತ್ ದಿಪ್ಕೆ ಅವರ ಅಜ್ಜಿ ನಿಧನರಾದ ಸುದ್ದಿ ತಿಳಿಸಿ, ಮನೆಗೆ ತೆರಳಲು ಅವಕಾಶ ನೀಡಿದರೂ ಆ ಆಫರ್ ಅನ್ನು ಅಭಿಜೀತ್ ನಿರಾಕರಿಸಿದ್ದರು. ನಿನ್ನೆ ವಿಮಾನದೊಳಗಿನಿಂದಲೇ ಅಭಿಜೀತ್ ದಿಪ್ಕೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅದಾದ ಕೆಲ ಹೊತ್ತಿನಲ್ಲೇ ದಿಪ್ಕೆ ಅವರ ಅಜ್ಜಿ ಮಹಾರಾಷ್ಟ್ರದ ನಿವಾಸದಲ್ಲಿ ಮೃತಪಟ್ಟ ಸುದ್ದಿ ಹೊರಬಿದ್ದಿತ್ತು. ಅಜ್ಜಿ ನಿಧನರಾದರೂ ಪೊಲೀಸರು ದಿಪ್ಕೆ ಅವರನ್ನು ಕಸ್ಟಡಿಯಿಂದ ಬಿಡಲಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ಇದರಲ್ಲಿ ಪೊಲೀಸರು ಅಭಿಜೀತ್ ದಿಪ್ಕೆ ಅವರಿಗೆ ಅವರ ಅಜ್ಜಿಯ ಸಾವಿನ ಸುದ್ದಿ ತಿಳಿಸಿ, ಮನೆಗೆ ತೆರಳಲು ಅವಕಾಶ ನೀಡುತ್ತೇವೆ ಎಂದು ಹೇಳಿರುವುದನ್ನು ಕಾಣಬಹುದು. ಆದರೆ, ದಿಪ್ಕೆ ಆ ಆಫರ್ ಅನ್ನು ನಿರಾಕರಿಸಿದ್ದಾರೆ.
ನವದೆಹಲಿ, ಅಕ್ಟೋಬರ್ 11: ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ಅಜ್ಜಿ ನಿಧನರಾದ ಸುದ್ದಿ ತಿಳಿಸಿ, ಮನೆಗೆ ತೆರಳಲು ಅವಕಾಶ ನೀಡಿದರೂ ಆ ಆಫರ್ ಅನ್ನು ಅಭಿಜೀತ್ ನಿರಾಕರಿಸಿದ್ದರು. ನಿನ್ನೆ ವಿಮಾನದೊಳಗಿನಿಂದಲೇ ಅಭಿಜೀತ್ ದಿಪ್ಕೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅದಾದ ಕೆಲ ಹೊತ್ತಿನಲ್ಲೇ ದಿಪ್ಕೆ ಅವರ ಅಜ್ಜಿ ಮಹಾರಾಷ್ಟ್ರದ ನಿವಾಸದಲ್ಲಿ ಮೃತಪಟ್ಟ ಸುದ್ದಿ ಹೊರಬಿದ್ದಿತ್ತು. ಅಜ್ಜಿ ನಿಧನರಾದರೂ ಪೊಲೀಸರು ದಿಪ್ಕೆ ಅವರನ್ನು ಕಸ್ಟಡಿಯಿಂದ ಬಿಡಲಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ಇದರಲ್ಲಿ ಪೊಲೀಸರು ಅಭಿಜೀತ್ ದಿಪ್ಕೆ ಅವರಿಗೆ ಅವರ ಅಜ್ಜಿಯ ಸಾವಿನ ಸುದ್ದಿ ತಿಳಿಸಿ, ಮನೆಗೆ ತೆರಳಲು ಅವಕಾಶ ನೀಡುತ್ತೇವೆ ಎಂದು ಹೇಳಿರುವುದನ್ನು ಕಾಣಬಹುದು. ಆದರೆ, ದಿಪ್ಕೆ ಆ ಆಫರ್ ಅನ್ನು ನಿರಾಕರಿಸಿದ್ದಾರೆ.
ವಿಮಾನ ಟಿಕೆಟ್ ಮತ್ತು ಫೋನ್ ಕರೆಗಳು ಸೇರಿದಂತೆ ಅಭಿಜೀತ್ ದಿಪ್ಕೆ ಅವರಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲು ಸಿದ್ಧವಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಪೋಷಕರೊಂದಿಗೆ ಮಾತನಾಡಲು ಬಯಸುತ್ತೀರಾ? ಎಂದು ಅವರನ್ನು ಹಲವು ಬಾರಿ ಕೇಳಿದರೂ ದಿಪ್ಕೆ ಅದನ್ನು ನಿರಾಕರಿಸಿದರು ಎಂದು ದೆಹಲಿ ಪೊಲೀಸ್ ಡಿಸಿಪಿ ನೇಹಾ ಯಾದವ್ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ