Charmadi Ghat: ಚಾರ್ಮಾಡಿ ಘಾಟ್​ನಲ್ಲಿ ದಟ್ಟ ಮಂಜು, ರಸ್ತೆ ಕಾಣದೆ ಸವಾರರು ಕಂಗಾಲು

| Updated By: ಆಯೇಷಾ ಬಾನು

Updated on: Jul 18, 2023 | 12:08 PM

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ಇರುವ ಚಾರ್ಮಾಡಿ ಘಾಟ್​ನಲ್ಲಿ ದಟ್ಟ ಮಂಜು ಆವರಿಸಿದೆ. ಇದರಿಂದ ವಾಹನ ಸವಾರರಿಗೆ ಭಾರೀ ಸಮಸ್ಯೆಗಳಾಗುತ್ತಿವೆ.

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ಇರುವ ಚಾರ್ಮಾಡಿ ಘಾಟ್​ನಲ್ಲಿ ದಟ್ಟ ಮಂಜು ಆವರಿಸಿದೆ. ಇದರಿಂದ ವಾಹನ ಸವಾರರಿಗೆ ಭಾರೀ ಸಮಸ್ಯೆಗಳಾಗುತ್ತಿವೆ. ದಟ್ಟವಾಗಿ ಆವರಿಸಿರುವ ಮಂಜಿನಿಂದ ವಾಹನ ಸವಾರರ ವಾಹನ ಚಲಾಯಿಸಲಾಗದೆ ಪರದಾಡುತ್ತಿದ್ದಾರೆ. ಮತ್ತೆ ಕೆಲವರು ಮಂಜಿಗೆ ಮೈವೊಡ್ಡಿ ಸಂಭ್ರಮಿಸುತ್ತಿದ್ದಾರೆ. ಕಿರಿದಾದ ಸಾವಿರಾರು ಅಡಿ ಪ್ರಪಾತದ ರಸ್ತೆಯಲ್ಲಿ ವಾಹನ ಚಾಲನೆಗೆ ಮಂಜು ಅಡ್ಡಿಯಾಗುತ್ತಿದ್ದು ವಾಹನಗಳ ಹೆಡ್ ಲೈಟ್ ಹಾಕಿ ಸವಾರರು ವಾಹನ ಚಾಲನೆ ಮಾಡುತ್ತಿದ್ದಾರೆ. ದಟ್ಟ ಮಂಜು ಮತ್ತು ಮಳೆಯಿಂದ ಸವಾರರು ಕಂಗಾಲಾಗಿದ್ದಾರೆ.

Published on: Jul 18, 2023 10:24 AM