Sanjay Dutt: ಮೈಸೂರಿಗೆ ಬಂದ ಅಧೀರನ ನೋಡಲು ನೂಕು ನುಗ್ಗಲು

Sanjay Dutt: ಮೈಸೂರಿಗೆ ಬಂದ ಅಧೀರನ ನೋಡಲು ನೂಕು ನುಗ್ಗಲು

ರಾಜೇಶ್ ದುಗ್ಗುಮನೆ
|

Updated on: Jul 18, 2023 | 9:54 AM

ಸಂಜಯ್ ದತ್ ಮೈಸೂರಿಗೆ ಆಗಮಿಸಿದ್ದರು. ಅವರನ್ನು ನೋಡಲು ಸಾಕಷ್ಟು ಮಂದಿ ಅಭಿಮಾನಿಗಳು ನೆರೆದಿದ್ದರು. ಫ್ಯಾನ್ಸ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ನಟ ಸಂಜಯ್ ದತ್ (Sanjay Dutt) ಅವರಿಗೆ ಈಗ ಕರ್ನಾಟಕದ ಜೊತೆ ನಂಟು ಬೆಳೆದಿದೆ. ‘ಕೆಜಿಎಫ್ 2’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಅವರು ಮಾಡಿದ ಅಧೀರನ ಪಾತ್ರ ಗಮನ ಸೆಳೆಯಿತು. ಅವರು ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಧ್ರುವ ಸರ್ಜಾ (Dhruva Sarja) ಅವರು ಈ ಚಿತ್ರಕ್ಕೆ ಹೀರೋ. ಇದು ಸಂಜಯ್ ದತ್ ಅವರ ಎರಡನೇ ಕನ್ನಡ ಸಿನಿಮಾ. ಅವರು ಜುಲೈ 17ರಂದು ಮೈಸೂರಿಗೆ ಆಗಮಿಸಿದ್ದರು. ಅವರನ್ನು ನೋಡಲು ಸಾಕಷ್ಟು ಮಂದಿ ಅಭಿಮಾನಿಗಳು ನೆರೆದಿದ್ದರು. ಫ್ಯಾನ್ಸ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ