AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ

Video: ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ

ನಯನಾ ರಾಜೀವ್
|

Updated on: Jul 27, 2025 | 9:57 AM

Share

ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಏರ್​​ಲೈನ್ಸ್​ ವಿಮಾನ ಟಕ್​ ಆಫ್ ಆಗುವಾಗ ಮುಖ್ಯ ಲ್ಯಾಂಡಿಂಗ್ ಗೇರ್​​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರು ಭಯಾನಕ ಪರಿಸ್ಥಿತಿಯನ್ನು ಎದುರಿಸಿದರು. ವಿಮಾನವು ಮಿಯಾಮಿಗೆ ಹಾರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕೂಡಲೇ ವಿಮಾನವನ್ನು ನಿಲ್ಲಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಘಟನೆಯಲ್ಲಿ ಒಬ್ಬ ಪ್ರಯಾಣಿಕರು ಗಾಯಗೊಂಡಿದ್ದಾರೆ.

ವಾಷಿಂಗ್ಟನ್, ಜುಲೈ 27: ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಏರ್​​ಲೈನ್ಸ್​ ವಿಮಾನ ಟಕ್​ ಆಫ್ ಆಗುವಾಗ ಮುಖ್ಯ ಲ್ಯಾಂಡಿಂಗ್ ಗೇರ್​​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರು ಭಯಾನಕ ಪರಿಸ್ಥಿತಿಯನ್ನು ಎದುರಿಸಿದರು. ವಿಮಾನವು ಮಿಯಾಮಿಗೆ ಹಾರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕೂಡಲೇ ವಿಮಾನವನ್ನು ನಿಲ್ಲಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಘಟನೆಯಲ್ಲಿ ಒಬ್ಬ ಪ್ರಯಾಣಿಕರು ಗಾಯಗೊಂಡಿದ್ದಾರೆ. ವಿಮಾನವು ರನ್‌ವೇಯಲ್ಲಿದ್ದಾಗ ಬೋಯಿಂಗ್ 737 MAX8 ನ ಮುಖ್ಯ ಚಕ್ರಗಳ ಬಳಿ ಬೆಂಕಿ ಕಾಣಿಸಿಕೊಂಡಿತು. ವಿಮಾನದಲ್ಲಿ 173 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಇದ್ದರು, ಅವರನ್ನು ತುರ್ತು ನಿರ್ಗಮನ ಬಳಸಿಕೊಂಡು ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ