VIDEO: ಕೇವಲ 7 ರನ್ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್ಗಳು
NZ vs SA T20: ಕೊನೆಯ ಓವರ್ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಬೇಕಿದದ್ದು 6 ಎಸೆತಗಳಲ್ಲಿ ಕೇವಲ 7 ರನ್ಗಳು ಮಾತ್ರ. ಅಲ್ಲದೆ ಕ್ರೀಸ್ನಲ್ಲಿ ಸ್ಫೋಟಕ ದಾಂಡಿಗ ಡೆವಾಲ್ಡ್ ಬ್ರೆವಿಸ್ ಹಾಗೂ ಜಾರ್ಜ್ ಲಿಂಡೆ ಇದ್ದರು. ಹೀಗಾಗಿ ಸೌತ್ ಆಫ್ರಿಕಾ ತಂಡದ ಗೆಲುವು ಬಹುತೇಕ ಖಚಿತವಾಗಿತ್ತು. ಆದರೆ ಮ್ಯಾಟ್ ಹೆನ್ರಿ ಎಸೆದ ಕೊನೆಯ ಓವರ್ನಲ್ಲಿ ಹೈ ಡ್ರಾಮಾಗೆ ಸಾಕ್ಷಿಯಾಯಿತು.
ಕ್ರಿಕೆಟ್ ಅಂಗಳದಲ್ಲಿ ಕ್ಯಾಚಸ್ ವಿನ್ಸ್ ಮ್ಯಾಚಸ್ ಎಂಬ ಮಾತಿದೆ. ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯದಲ್ಲಿ ಮತ್ತೊಮ್ಮೆ ನಿರೂಪಿತವಾಗಿದೆ. ಝಿಂಬಾಬ್ವೆ, ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ನಡುವಣ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು.
ಹರಾರೆಯ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 19 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿದ್ದರು.
ಇತ್ತ ಕೊನೆಯ ಓವರ್ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಬೇಕಿದದ್ದು 6 ಎಸೆತಗಳಲ್ಲಿ ಕೇವಲ 7 ರನ್ಗಳು ಮಾತ್ರ. ಅಲ್ಲದೆ ಕ್ರೀಸ್ನಲ್ಲಿ ಸ್ಫೋಟಕ ದಾಂಡಿಗ ಡೆವಾಲ್ಡ್ ಬ್ರೆವಿಸ್ ಹಾಗೂ ಜಾರ್ಜ್ ಲಿಂಡೆ ಇದ್ದರು. ಹೀಗಾಗಿ ಸೌತ್ ಆಫ್ರಿಕಾ ತಂಡದ ಗೆಲುವು ಬಹುತೇಕ ಖಚಿತವಾಗಿತ್ತು. ಆದರೆ ಮ್ಯಾಟ್ ಹೆನ್ರಿ ಎಸೆದ ಕೊನೆಯ ಓವರ್ನಲ್ಲಿ ಹೈ ಡ್ರಾಮಾಗೆ ಸಾಕ್ಷಿಯಾಯಿತು.
20ನೇ ಓವರ್ನ ಮೊದಲ ಎಸೆತದಲ್ಲಿ ಡೆವಾಲ್ಡ್ ಬ್ರೆವಿಸ್ ಯಾವುದೇ ರನ್ ಗಳಿಸಲಿಲ್ಲ. 2ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿಯಾಗಿ ಬಾರಿಸಿದರು. ಇನ್ನೇನು ಚೆಂಡು ಬೌಂಡರಿ ಲೈನ್ ದಾಟಿ ಸಿಕ್ಸ್ ಆಗಲಿದೆ ಅನ್ನುವಷ್ಟರಲ್ಲಿ ಮೈಕಲ್ ಬ್ರೇಸ್ವೆಲ್ ಬೌಂಡರಿ ಲೈನ್ನಲ್ಲಿ ನಿಂತು ಅತ್ಯದ್ಭುತ ಕ್ಯಾಚ್ ಹಿಡಿದರು.
ಆ ಬಳಿಕ ಬಂದ ಕಾರ್ಬಿನ್ ಬಾಷ್ 3ನೇ ಎಸೆತದಲ್ಲಿ 2 ರನ್ ಕಲೆಹಾಕಿದರು. ಅದರಂತೆ ಕೊನೆಯ 3 ಎಸೆತಗಳಲ್ಲಿ 5 ರನ್ ಬೇಕಿತ್ತು. 4ನೇ ಎಸೆತದಲ್ಲಿ ಬಾಷ್ 1 ರನ್ ಓಡಿದರು. ಇತ್ತ ಸ್ಟ್ರೈಕ್ ಪಡೆದ ಜಾರ್ಜ್ ಲಿಂಡೆ 5ನೇ ಎಸೆತವನ್ನು ನೇರವಾಗಿ ಬಾರಿಸಿದರು. ಚೆಂಡು ಇನ್ನೇನು ಬೌಂಡರಿ ಲೈನ್ ದಾಟಬೇಕಿತ್ತು. ಈ ವೇಳೆ ಓಡಿ ಬಂದ ಡೇರಿಲ್ ಮಿಚೆಲ್ ಅದ್ಭುತ ಡೈವ್ ಕ್ಯಾಚ್ ಹಿಡಿದರು.
ಪರಿಣಾಮ ಕೊನೆಯ ಎಸೆತದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ 4 ರನ್ ಬೇಕಿತ್ತು. ಈ ಎಸೆತವನ್ನು ಡಾಟ್ ಮಾಡುವ ಮೂಲಕ ಮ್ಯಾಟ್ ಹೆನ್ರಿ ನ್ಯೂಝಿಲೆಂಡ್ ತಂಡಕ್ಕೆ 3 ರನ್ಗಳ ರೋಚಕ ಜಯ ತಂದುಕೊಟ್ಟರು.
ಸೌತ್ ಆಫ್ರಿಕಾ ತಂಡ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದ ಫಲಿತಾಂಶವನ್ನು ಅದ್ಭುತ ಫೀಲ್ಡಿಂಗ್ ಮೂಲಕ ಮೈಕಲ್ ಬ್ರೇಸ್ವೆಲ್ ಹಾಗೂ ಡೇರಿಲ್ ಮಿಚೆಲ್ ಬದಲಿಸಿದರು. ಈ ಬದಲಿಸುವಿಕೆಯೊಂದಿಗೆ 3 ರನ್ಗಳ ರೋಚಕ ಜಯದೊಂದಿಗೆ ನ್ಯೂಝಿಲೆಂಡ್ ತಂಡ ತ್ರಿಕೋನ ಸರಣಿ ಗೆದ್ದುಕೊಂಡಿದೆ.

