ಮೈಸೂರಿನಲ್ಲೇ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾರಿ ಪ್ರಮಾಣದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಇನ್ನು ಡ್ರಗ್ಸ್ ತಯಾರಿಕಾ ಘಟಕ ಮೈಸೂರಿನಲ್ಲೇ ಇರುವುದು ಪತ್ತೆಯಾಗಿದೆ. ಮೈಸೂರಿನಲ್ಲಿ ಸಿಕ್ಕ ಮಾದಕ ವಸ್ತುವಿಗೆ ಮಹಾರಾಷ್ಟ್ರದ ನಂಟು ಇದ್ದು, ಮಹಾರಾಷ್ಟ್ರದಲ್ಲಿ ಸೆರೆಯಾದ ಡ್ರಗ್ ಪೆಡ್ಲರ್‌ನಿಂದ ಮಾಹಿತಿ ಬಹಿರಂಗವಾಗಿದೆ.ಮೈಸೂರಿನಿಂದ ಡ್ರಗ್ ಸಪ್ಲೈ ಆಗುತ್ತಿರುವ ಬಗ್ಗೆ ಪೆಡ್ಲರ್ ಬಾಯ್ಬಿಟ್ಟಿದ್ದಾನೆ. ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು, ಮೈಸೂರು ಹೊರವಲಯದ ರಿಂಗ್ ರಸ್ತೆ ಬಳಿ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದ್ದಾರೆ.
ಮೈಸೂರು, (ಜುಲೈ 27): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾರಿ ಪ್ರಮಾಣದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಇನ್ನು ಡ್ರಗ್ಸ್ ತಯಾರಿಕಾ ಘಟಕ ಮೈಸೂರಿನಲ್ಲೇ ಇರುವುದು ಪತ್ತೆಯಾಗಿದೆ. ಮೈಸೂರಿನಲ್ಲಿ ಸಿಕ್ಕ ಮಾದಕ ವಸ್ತುವಿಗೆ ಮಹಾರಾಷ್ಟ್ರದ ನಂಟು ಇದ್ದು, ಮಹಾರಾಷ್ಟ್ರದಲ್ಲಿ ಸೆರೆಯಾದ ಡ್ರಗ್ ಪೆಡ್ಲರ್‌ನಿಂದ ಮಾಹಿತಿ ಬಹಿರಂಗವಾಗಿದೆ.ಮೈಸೂರಿನಿಂದ ಡ್ರಗ್ ಸಪ್ಲೈ ಆಗುತ್ತಿರುವ ಬಗ್ಗೆ ಪೆಡ್ಲರ್ ಬಾಯ್ಬಿಟ್ಟಿದ್ದಾನೆ. ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು, ಮೈಸೂರು ಹೊರವಲಯದ ರಿಂಗ್ ರಸ್ತೆ ಬಳಿ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕೋಟ್ಯಾಂತರ ಬೆಲೆಯ ಎಂ.ಡಿ.ಎಂ.ಎ ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ ಸೇರಿ ದೇಶ ವಿದೇಶಗಳಿಗೆ ಎಂಡಿಎಂಎ ಸರಬರಾಜು ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಎಂ.ಡಿ.ಎಂ.ಎ ಬೆಲೆ 2 ಕೋಟಿ ರೂ. ಗ್ಯಾರೇಜ್ ಹೆಸರಿನಲ್ಲಿ ಈ ದಂಧೆ ನಡೆಯುತ್ತಿತ್ತು. ಇನ್ನು ಡ್ರಗ್ಸ್ ತಯಾರಿಕಾ ಘಟಕ ಹೇಗಿದೆ ಎನ್ನುವುವದನ್ನು ನೋಡಿ.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
