ಬಿಜೆಪಿ ಶಾಸಕ ಶಿವನಗೌಡ ನಾಯಕ್ ಕುಮ್ಮಕ್ಕಿನ ಮೇರೆಗೆ ತಮ್ಮ ಹಲ್ಲೆ ನಡೆಸಲಾಗಿದೆ ಅಂತ ದೇವದುರ್ಗ ಜೆಡಿ(ಎಸ್) ಕಾರ್ಯಕರ್ತರ ದೂರು
ತಮ್ಮ ಮೇಲಿನ ಹಲ್ಲೆಗೆ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಅವರೇ ನೇರ ಕಾರಣ ಎಂದು ಹೇಳಿರುವ ಕರೆಮ್ಮ ನಾಯಕ್ ತಾವು ದೇವಸ್ಥಾನಕ್ಕೆ ಹೋಗುವಾಗ ಹಲ್ಲೆ ನಡೆಸಲಾಗಿದೆ ಎಂದಿದ್ದಾರೆ.
ರಾಯಚೂರು ಜಿಲ್ಲೆ ದೇವದುರ್ಗ (Deodurga) ತಾಲ್ಲೂಕಿನ ದ್ಯಾಮ್ಲಾ ನಾಯಕ್ ತಾಂಡಾದ ಬಿಜೆಪಿ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವರೆಂದು ಜೆಡಿ(ಎಸ್) ನಾಯಕಿ ಕರೆಮ್ಮ ನಾಯಕ್ (Karemma Nayak) ಅರೋಪಿಸಿದ್ದಾರೆ. ತಮ್ಮ ಮೇಲಿನ ಹಲ್ಲೆಗೆ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್ (Shivangouda Nayak) ಅವರೇ ನೇರ ಕಾರಣ ಎಂದು ಹೇಳಿರುವ ಕರೆಮ್ಮ ನಾಯಕ್ ತಾವು ದೇವಸ್ಥಾನಕ್ಕೆ ಹೋಗುವಾಗ ಹಲ್ಲೆ ನಡೆಸಲಾಗಿದೆ ಎಂದಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.