AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Appu Samadhi: ಪುನೀತ್​ ರಾಜ್​ಕುಮಾರ್​ ಪುಣ್ಯ ಸ್ಮರಣೆ; ಅಪ್ಪನ​ ಸಮಾಧಿಗೆ ನಮಿಸಲು ಬಂದ ಪುತ್ರಿ ವಂದಿತಾ

Appu Samadhi: ಪುನೀತ್​ ರಾಜ್​ಕುಮಾರ್​ ಪುಣ್ಯ ಸ್ಮರಣೆ; ಅಪ್ಪನ​ ಸಮಾಧಿಗೆ ನಮಿಸಲು ಬಂದ ಪುತ್ರಿ ವಂದಿತಾ

TV9 Web
| Edited By: |

Updated on: Oct 29, 2022 | 11:21 AM

Share

Puneeth Rajkumar daughter: ಪುನೀತ್​ ರಾಜ್​ಕುಮಾರ್​ ಪುಣ್ಯ ಸ್ಮರಣೆ ಪ್ರಯುಕ್ತ ಅವರ​ ಕುಟುಂಬದವರು ಅಪ್ಪು ಸಮಾಧಿಗೆ ನಮಿಸಿದ್ದಾರೆ. ಎಲ್ಲರೂ ಸೇರಿ ಪೂಜೆ ಸಲ್ಲಿಸಿದ್ದಾರೆ.

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ನಿಧನರಾಗಿ ಒಂದು ವರ್ಷ ಕಳೆದಿದೆ. ಅವರ ಅಗಲಿಕೆಯಿಂದ ಕುಟುಂಬದವರಿಗೆ ಆದ ನೋವು ಅಷ್ಟಿಷ್ಟಲ್ಲ. ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮತ್ತು ಪುತ್ರಿಯರಾದ ವಂದಿತಾ, ಧ್ರುತಿ ಕಣ್ಣೀರಲ್ಲೇ ಕೈ ತೊಳೆದಿದ್ದಾರೆ. ಇಂದು (ಅ.29) ಅಪ್ಪು ಪುಣ್ಯ ಸ್ಮರಣೆ (Puneeth Rajkumar Death Anniversary). ಆ ಪ್ರಯುಕ್ತ ಪುನೀತ್​ ಕುಟುಂಬದವರು ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಸಮಾಧಿಗೆ ನಮಿಸಿದ್ದಾರೆ. ವಿವಿಧ ಬಗೆಯ ತಿನಿಸುಗಳನ್ನು ಮಾಡಿ ಅರ್ಪಿಸಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕೂಡ ಸಮಾಧಿಗೆ (Puneeth Rajkumar Samadhi) ಭೇಟಿ ನೀಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.