ಸೋಲಿನ ಭೀತಿಯಿಂದ ಬಿಜೆಪಿ ಜನಾರ್ಧನ ರೆಡ್ಡಿಯನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ: ಸಂತೋಷ್ ಲಾಡ್

|

Updated on: Mar 25, 2024 | 6:58 PM

ಸಮೀಕ್ಷೆಗಳ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 160-180 ಸ್ಥಾನ ಮಾತ್ರ ಸಿಗಲಿವೆ ಮತ್ತು ತನ್ನ ಅಂದಾಜಿನ ಪ್ರಕಾರ 180-200 ಸೀಟು ಬಿಜೆಪಿ ದಕ್ಕಲಿವೆ ಎಂದು ಸಂತೋಷ್ ಲಾಡ್ ಹೇಳಿದರು. ಈ ಹಿನ್ನೆಲೆಯಲ್ಲೇ ಭೀತಿಗೊಳಗಾಗಿರುವ ಬಿಜೆಪಿ ನಾಯಕರು ಸಿಕ್ಕಸಿಕ್ಕರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಹೇಳಿದರು.

ಹುಬ್ಬಳ್ಳಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಮತ್ತು ಶಾಸಕ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಬಿಜೆಪಿ ಸೇರಿದ್ದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಕ್ರಿಯೆಗಳನ್ನು ನೀಡಲಾರಂಭಿಸಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ (Labour minister Santosh Lad), ಸೋಲಿನ ಭೀತಿಯಿಂದ ಹತಾಶರಾಗಿ ಬಿಜೆಪಿ ನಾಯಕರು ರೆಡ್ಡಿಯವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದರು. ರೆಡ್ಡಿ ವಿರುದ್ಧ ಆರೋಪಗಳನ್ನು (allegations) ಮಾಡಿ ಜೈಲಿಗೆ ಕಳಿಸಿದ್ದಲ್ಲದೆ ಅವರನ್ನು ಪಕ್ಷದಿಂದ ಉಚ್ಚಾಟನೆ ಕೂಡ ಮಾಡಲಾಗಿತ್ತು. ಆದರೆ, ಅದೆಲ್ಲವನ್ನು ಈಗ ಮರೆತು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಬಿಜೆಪಿ ಒಂದು ವಾಷಿಂಗ್ ಮಶೀನ್ ಅಂತ ಎಲ್ಲರಿಗೂ ಗೊತ್ತಿದೆ, ಭ್ರಷ್ಟಾಚಾರ ನಡೆಸಿದವರು ಬಿಜೆಪಿ ಸೇರುತ್ತಲೇ ವಾಷಿಂಗ್ ಮಶೀನ್ ಅವರಿಗೆ ಮೆತ್ತಿರುವ ಕಳಂಕವನ್ನೆಲ್ಲ ತೊಳೆದು ಬಿಡುತ್ತದೆ ಎಂದು ಹೇಳಿದ ಲಾಡ್, ಸಮೀಕ್ಷೆಗಳ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 160-180 ಸ್ಥಾನ ಮಾತ್ರ ಸಿಗಲಿವೆ ಮತ್ತು ತನ್ನ ಅಂದಾಜಿನ ಪ್ರಕಾರ 180-200 ಸೀಟು ಬಿಜೆಪಿ ದಕ್ಕಲಿವೆ ಎಂದರು. ಈ ಹಿನ್ನೆಲೆಯಲ್ಲೇ ಭೀತಿಗೊಳಗಾಗಿರುವ ಬಿಜೆಪಿ ನಾಯಕರು ಸಿಕ್ಕಸಿಕ್ಕರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:   ಬಿಜೆಪಿ ಜೊತೆ ಕೆಆರ್​ಪಿಪಿಯನ್ನು ವಿಲೀನಗೊಳಿಸುವ ದೂರದ ಯೋಚನೆಯೂ ನನ್ನ ಮನಸ್ಸಲ್ಲಿ ಸುಳಿಯದು: ಗಾಲಿ ಜನಾರ್ಧನ ರೆಡ್ಡಿ