ಮಂಡ್ಯದ ಮಳವಳ್ಳಿ ಬಳಿ ಸೇತುವೆ ನಿರ್ಮಾಣಕ್ಕೆಂದು ಅಗೆದಿದ್ದ ಹಳ್ಳಕ್ಕೆ ಕೆಎಸ್ ಅರ್ ಟಿಸಿ ಬಸ್ ಬಿದ್ದರೂ ಎಲ್ಲ ಪ್ರಯಾಣಿಕರು ಸುರಕ್ಷಿತ!

|

Updated on: Aug 10, 2023 | 5:58 PM

ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಸೂಚನಾ ಫಲಕ ನೆಡದಿರುವುದು ಮತ್ತು ಬ್ಯಾರಿಕೇಡ್ ಗಳನ್ನು ಅಡ್ಡಲಾಗಿ ಇಡದಿರುವುದು ಕಾರಣವೆಂದು ಸ್ಥಳೀಯರು ಹೇಳುತ್ತಿದ್ದಾರೆ.

ಮಂಡ್ಯ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಸೇರಿದ ಸರ್ಕಾರಿ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ 15-20 ಜನ ನಿಜಕ್ಕೂ ಅದೃಷ್ಟವಂತರು ಮಾರಾಯ್ರೇ. ಯಾಕೆ ಅಂತ ನಿಮಗೆ ಗೊತ್ತಾಗುತ್ತದೆ. ತಲಕಾಡಿನಿಂದ ಮಳವಳ್ಳಿ ಕಡೆ ಹೊರಟಿದ್ದ ಬಸ್ ಕೊಳ್ಳೇಗಾಲ-ಮಳವಳ್ಳಿ (Kollegal-Malavalli) ಹೆದ್ದಾರಿಯಲ್ಲಿ ಬರುವ ಮಾರೇನಹಳ್ಳಿ ಹೆಸರಿನ ಗ್ರಾಮದ ಬಳಿ ಸೇತುವೆ ನಿರ್ಮಾಣಕ್ಕೆಂದು ನಿರ್ಮಿಸಿದ್ದ ಹಳ್ಳಕ್ಕೆ ಬಿದ್ದಿದೆ. ಚಾಲಕ (driver) ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದು ನಿಜವಾದರೂ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಸೂಚನಾ ಫಲಕ ನೆಡದಿರುವುದು ಮತ್ತು ಬ್ಯಾರಿಕೇಡ್ ಗಳನ್ನು ಅಡ್ಡಲಾಗಿ ಇಡದಿರುವುದು ಕಾರಣವೆಂದು ಸ್ಥಳೀಯರು ಹೇಳುತ್ತಿದ್ದಾರೆ. ಸಣ್ಣಪುಟ್ಟ ಗಾಯಗಳಿಂದ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸ್ ಚಾಲಕ ಅದನ್ನೇ ಹೇಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡರೆ ಮುಂದಾಗಬಹುದಾದ ಅಪಾಯಗಳನ್ನು ತಡೆಯಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on