ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರು ಖುಷ್; ಸಾರಿಗೆ ಸಂಸ್ಥೆ ಸಿಬ್ಬಂದಿ ವೇತನ ಸಿಗದೆ ಠುಸ್ಸ್!

KKRTC staff Salary Delay; ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಈ ಮೊದಲು ಪ್ರತಿ ತಿಂಗಳು ಒಂದನೇ ತಾರೀಕಿಗೆ ವೇತನ ಜಮೆಯಾಗುತ್ತಿತ್ತು. ಆದರೆ ಈ ತಿಂಗಳು 9ನೇ ತಾರೀಕು ಬಂದ್ರು ಕೂಡಾ ಸಿಬ್ಬಂದಿಯ ವೇತನ ಜಮೆಯಾಗಿಲ್ಲಾ. ಇದಕ್ಕೆ ಕಾರಣ ಶಕ್ತಿ ಯೋಜನೆ ಅಂತಾರೆ ಸಾರಿಗೆ ಸಂಸ್ಥೆಯ ಸಿಬ್ಬಂದಿ.

ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರು ಖುಷ್; ಸಾರಿಗೆ ಸಂಸ್ಥೆ ಸಿಬ್ಬಂದಿ ವೇತನ ಸಿಗದೆ ಠುಸ್ಸ್!
ಸಾಂದರ್ಭಿಕ ಚಿತ್ರ (ಕೃಪೆ; KKRTC ಫೇಸ್​ಬುಕ್ ಪುಟ)Image Credit source: Facebook
Follow us
| Updated By: ಗಣಪತಿ ಶರ್ಮ

Updated on: Aug 09, 2023 | 3:24 PM

ಕಲಬುರಗಿ, ಆಗಸ್ಟ್ 9: ಅಧಿಕಾರಕ್ಕೆ ಬಂದ ಸರ್ಕಾರಗಳು ಜನರ ಮೆಚ್ಚಿಸಲು ಯೋಜನೆಯನ್ನು ಜಾರಿಗೊಳಿಸಿದರೆ ಸಾಲದು, ಯೋಜನೆಗೆ ಸರಿಯಾಗಿ ಹಣವನ್ನು ಕೂಡಾ ಹೊಂದಾಣಿಕೆ ಮಾಡಬೇಕು. ಇಲ್ಲದಿದ್ದರೆ ಯೋಜನೆಯಿಂದ ಕೆಲವರಿಗೆೆ ಲಾಭವಾದ್ರೆ, ಇನ್ನು ಕೆಲವರು ಅದರಿಂದ ತೊಂದರೆ ಅನುಭವಿಸಬೇಕಾಗುತ್ತದೆ. ರಾಜ್ಯದಲ್ಲಿ ಶಕ್ತಿ ಯೋಜನೆಯಿಂದ (Shakti Scheme) ಮಹಿಳಾ ಪ್ರಯಾಣಿಕರು ಖುಷಿಯಾಗಿದ್ದಾರೆ. ಆದರೆ ಅದರ ಪರಿಣಾಮದಿಂದ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸರಿಯಾದ ಸಮಯಕ್ಕೆ ವೇತನ ಸಿಗದೆ ಪರದಾಡುತ್ತಿದ್ದಾರೆ.

ಶಕ್ತಿ ಯೋಜನೆಯ ಸೈಡ್ ಎಪೆಕ್ಟ್

ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ಐದು ಪ್ರಮುಖ ಗ್ಯಾರಂಟಿಗಳನ್ನು ನೀಡಿತ್ತು. ಅದರಲ್ಲಿ ಒಂದು ಶಕ್ತಿ ಯೋಜನೆ. ತಮ್ಮ ಸರ್ಕಾರ ಬಂದರೆ ಸರ್ಕಾರಿ ಬಸ್​​ನಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡಬಹುದು ಅಂತ ಹೇಳಿತ್ತು. ಗ್ಯಾರಂಟಿ ಎಫೆಕ್ಟ್​​ನಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ವಿತ್ವಕ್ಕೆ ಬಂದಿದೆ. ಸರ್ಕಾರ ರಚನೆಯಾದ ಮೇಲೆ ಮೊದಲು ಜಾರಿಯಾಗಿದ್ದೇ ಶಕ್ತಿ ಯೋಜನೆ. ಹೌದು ಕಳೆದ ಜೂನ್ 11 ರಂದು ರಾಜ್ಯಾದ್ಯಂತ ಶಕ್ತಿ ಯೋಜನೆ ಜಾರಿಯಾಗಿದೆ. ಶಕ್ತಿ ಯೋಜನೆ ಜಾರಿ ನಂತರ, ಮಹಿಳೆಯರು ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಯೋಜನೆಯಿಂದ ರಾಜ್ಯಾದ್ಯಂತ ಕೋಟ್ಯಂತರ ಮಹಿಳೆಯರು ಧಾರ್ಮಿಕ ಸ್ಥಳಗಳು ಸೇರಿದಂತೆ ಅನೇಕ ಕಡೆ ಓಡಾಡಿ ಸಂತಸ ಪಡುತ್ತಿದ್ದಾರೆ. ಒಂದಡೆ ಮಹಿಳಾ ಪ್ರಯಾಣಿಕರು ಸಂತಸ ಪಡುತ್ತಿದ್ದರೆ, ಇನ್ನೊಂದಡೆ ಇದೇ ಶಕ್ತಿ ಯೋಜನೆಯಿಂದ ಬಸ್ ಚಾಲಕರು, ನಿರ್ವಾಹಕರು ಸೇರಿದಂತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಪರದಾಡುವಂತಾಗಿದೆ.

ಸಕಾಲದಲ್ಲಿ ಸಿಗದ ವೇತನ, ಸಾರಿಗೆ ಸಂಸ್ಥೆ ಸಿಬ್ಬಂದಿ ಕಂಗಾಲು

ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಈ ಮೊದಲು ಪ್ರತಿ ತಿಂಗಳು ಒಂದನೇ ತಾರೀಕಿಗೆ ವೇತನ ಜಮೆಯಾಗುತ್ತಿತ್ತು. ಆದರೆ ಈ ತಿಂಗಳು 9ನೇ ತಾರೀಕು ಬಂದ್ರು ಕೂಡಾ ಸಿಬ್ಬಂದಿಯ ವೇತನ ಜಮೆಯಾಗಿಲ್ಲಾ. ಇದಕ್ಕೆ ಕಾರಣ ಶಕ್ತಿ ಯೋಜನೆ ಅಂತಾರೆ ಸಾರಿಗೆ ಸಂಸ್ಥೆಯ ಸಿಬ್ಬಂದಿ. ಹೌದು ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಸರ್ಕಾರದಿಂದ ನೇರವಾಗಿ ವೇತನ ಪಾವತಿಯಾಗೋದಿಲ್ಲಾ. ನಿಗಮಗಳೇ ತಮ್ಮ ಆಧಾಯದಲ್ಲಿ ವೇತನವನ್ನು ಸಿಬ್ಬಂದಿಗೆ ನೀಡುತ್ತಿವೆ. ಆದ್ರೆ ಕೆಎಸ್​​ಆರ್​​ಟಿಸಿ ಹೊರತುಪಡಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಉಳಿದ ಸಾರಿಗೆ ಸಂಸ್ಥೆಯ ನಿಗಮಗಳಿಗೆ ತಮ್ಮ ಸಿಬ್ಬಂದಿಯ ವೇತನ ಪಾವತಿ ಮಾಡಲಿಕ್ಕಾಗದೇ ಪರದಾಡುತ್ತಿವೆ. ಹೌದು ಸರ್ಕಾರ ಮಹಿಳಾ ಪ್ರಯಾಣಿಕರ ಟಿಕೆಟ್ ಹಣವನ್ನು ನಿಗಮಗಳಿಗೆ ಮರುಪಾವತಿ ಮಾಡೋದಾಗಿ ಹೇಳಿ ಯೋಜನೆ ಜಾರಿಗೊಳಿಸಿದೆ. ಅಂದ್ರೆ ಬಸ್ ನಲ್ಲಿ ಓಡಾಡಿದ ಮಹಿಳಾ ಪ್ರಯಾಣಿಕರಿಗೆ ಕಂಡಕ್ಟರ್ ಟಿಕೆಟ್ ಪ್ರೀ ಟಿಕೆಟ್ ನೀಡ್ತಾರೆ. ಪ್ರೀ ಟಿಕೆಟ್ ಪಡೆದು ಓಡಾಟ ನಡೆಸಿರೋ ಮಹಿಳೆಯ ಟಿಕೆಟ್ ಹಣವನ್ನು ಸರ್ಕಾರ, ನಿಗಮಗಳಿಗೆ ಮರುಪಾವತಿ ಮಾಡುಬೇಕು. ಆದ್ರೆ ಯೋಜನೆ ಜಾರಿಯಾದ ನಂತರ ಇಲ್ಲಿವರಗೆ ನಿಗಮಗಳಿಗೆ ಮರುಪಾವತಿ ಹಣ ಬಂದಿಲ್ಲಾ. ಇದು ಸಿಬ್ಬಂದಿಯ ವೇತನ ವಿಳಂಬಕ್ಕೆ ಕಾರಣವಾಗಿದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕೆಕೆಆರ್​​​ಟಿಸಿ ಸಿಬ್ಬಂದಿ

ಇನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಇಪ್ಪತ್ತೆರಡು ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಮೊದಲು ಪ್ರತಿನಿತ್ಯ ಸಂಸ್ಥೆಗೆ ಟಿಕೆಟ್ ನಿಂದ ನಾಲ್ಕುವರೆ ಕೋಟಿಗೂ ಹೆಚ್ಚು ಹಣ ಬರ್ತಿತ್ತಂತೆ. ಆದ್ರೆ ಶಕ್ತಿ ಯೋಜನೆ ಜಾರಿ ಮಾಡಿದ ನಂತರ, ಪುರುಷ ಪ್ರಯಾಣಿಕರ ಟಿಕೆಟ್ ನಿಂದ ಕೇವಲ ಎರಡು ಕೋಟಿ ಮೂವತ್ತು ಲಕ್ಷ ಹಣ ಬರ್ತಿದೆಯಂತೆ. ಸದ್ಯ ಈ ಹಣವನ್ನು ನಿಗಮ, ಡಿಸೇಲ್ ಗೆ ಖರ್ಚು ಮಾಡುತ್ತಿದೆಯಂತೆ. ಇನ್ನು ಪ್ರತಿ ತಿಂಗಳು ವೇತನಕ್ಕೆ 77 ಕೋಟಿ ರೂಪಾಯಿ ಖರ್ಚಾಗುತ್ತಂತೆ. ಇನ್ನು ಕಲ್ಯಾಣ ಕರ್ನಾಟರ ರಸ್ತೆ ಸಾರಿಗೆ ಸಂಸ್ಥೆಯೊಂದಕ್ಕೆ ಸರ್ಕಾರದಿಂದ ಮಹಿಳಾ ಪ್ರಯಾಣಿಕರ ಮರು ಪಾವತಿ ಹಣ 126 ಕೋಟಿ ರೂಪಾಯಿ ಬಾಕಿಯಿದೆಯಂತೆ. ಅದರ ಪೈಕಿ 37 ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ರು ಕೂಡಾ ಅದು ಇನ್ನು ನಿಗಮಗಳ ಅಕೌಂಟ್ ಗೆ ಜಮೆಯಾಗಿಲ್ಲಾ. ಇನ್ನು ವೇತನ ವಿಳಂಭದಿಂದ ತಮಗೆ ಸಾಕಷ್ಟು ತೊಂದರೆಯಾಗುತ್ತಿದೆ. ನಾವು ಕೂಡಾ ವೇತನ ನಂಬಿಕೊಂಡು ಅನೇಕ ಕಡೆ ಗೃಹಸಾಲ, ಲೋನ್, ವಿಮಾ ಪಾಲಸಿ ಮಾಡಿಸಿದ್ದೇವೆ. ಇದೀಗ ವೇತನ ವಿಳಂಭವಾದ್ರೆ, ನಾವು ಬಡ್ಡಿ ಕಟ್ಟಬೇಕಾಗುತ್ತದೆ. ದೈನಂದಿನ ಖರ್ಚಿಗೆ ಕೂಡಾ ತೊಂದರೆಯಾಗುತ್ತದೆ ಅಂತಿದ್ದಾರೆ ಸಾರಿಗೆ ಸಂಸ್ಥೆಯ ನೌಕರರು.

ನಾವು ಶಕ್ತಿ ಯೋಜನೆಯ ವಿರುದ್ದವಿಲ್ಲಾ. ಆದ್ರೆ ಸರ್ಕಾರ ಹೇಳಿದಂತೆ ಮಹಿಳಾ ಪ್ರಯಾಣಿಕರ ಟಿಕೆಟ್ ಹಣವನ್ನು ಪ್ರತಿ ತಿಂಗಳು ಅಂತ್ಯದೊಳಗೆ ನಿಗಮಗಳಿಗೆ ಮರುಪಾವತಿ ಮಾಡಬೇಕು. ಇದರಿಂದ ನಿಗಮಗಳಿಗೆ ಸಕಾಲದಲ್ಲಿ ವೇತನ ಪಾವತಿ ಮಾಡಲು ಸಾಧ್ಯವಾಗುತ್ತದೆ. ಈ ತಿಂಗಳು 9ನೇ ತಾರೀಕು ಬಂದರು ನಮಗೆ ವೇತನ ಸಿಕ್ಕಿಲ್ಲಾ. ಇದಿರಿಂದ ಸಿಬ್ಬಂಧಿ ಸಾಕಷ್ಟು ತೊಂದರೆಗೆ ಸಿಲುಕಿದೆ ಅಂತಿದ್ದಾರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್.

ಇದನ್ನೂ ಓದಿ: ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆ ಹಣ ಬಿಡುಗಡೆ ಮಾಡಿದ ಸರ್ಕಾರ; ಯಾವ ನಿಗಮಕ್ಕೆ ಎಷ್ಟು ಸಿಕ್ತು?

ಇನ್ನು ಸರ್ಕಾರದಿಂದ ಈಗಾಗಲೇ ಒಂದಿಷ್ಟು ಹಣ ಬಂದಿದೆ. ಇನ್ನುಳಿದ ಹಣ ಕೂಡಾ ಇಂದು ಅಥವಾ ನಾಳೆ ಬರ್ತದೆ. ಆದಷ್ಟು ಬೇಗನೆ ಸಿಬ್ಬಂಧಿಯ ವೇತನ ಪಾವತಿ ಮಾಡುತ್ತೇವೆ ಅಂತಿದ್ದಾರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಪಸ್ಥಾಪಕ ನಿರ್ದೇಶಕ ಎ. ರಾಚಪ್ಪ.

ಸದ್ಯ ಇಂದು ಅಥವಾ ನಾಳೆ ಸರ್ಕಾರದಿಂದ ಹಣ ಬಿಡುಗಡೆಯಾಗೋ ಸಾಧ್ಯತೆಯಿದ್ದು, ಆದಷ್ಟು ಬೇಗನೆ ವೇತನ ಪಾವತಿ ಮಾಡ್ತೇವೆ ಅಂತ ಸಂಸ್ಥೆಯ ಅಧಿಕಾರಿಗಳು ಹೇಳ್ತಿದ್ದಾರೆ. ಆದ್ರೆ ಸರ್ಕಾರ ಯೋಜನೆ ಜಾರಿ ಮಾಡಿದ್ರೆ ಸಾಲದು, ಯೋಜನೆಯ ಹಣವನ್ನು ಕೂಡಾ ಸಕಾಲದಲ್ಲಿ ನಿಗಮಗಳಿಗೆ ಪಾವತಿ ಮಾಡೋ ವ್ಯವಸ್ಥೆ ಮಾಡಬೇಕಿದೆ. ಅಂದಾಗ ಮಾತ್ರ ಸಂಸ್ಥೆಯ ಸಿಬ್ಬಂದಿಗೆ ಸರಿಯಾಗಿ ವೇತನ ಸಿಗುತ್ತದೆ. ಇಲ್ಲದಿದ್ದರೆ,ಸಾವಿರಾರು ಕುಟುಂಬಗಳು ಸಕಾಲದಲ್ಲಿ ವೇತನ ಸಿಗದೆ ತೊಂದರೆಗೆ ಸಿಲುಕಬೇಕಾಗುತ್ತದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ