ಹಿಂದೂ ಯುವಕರಿಗೆ ಚಿತ್ರಹಿಂಸೆ ನೀಡಿ, ಸುನ್ನತಿ ಮಾಡಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ರಕ್ಕಸ ಜಾಲ ಬಯಲು
ರಾಜ್ಯದಲ್ಲಿ ಮತಾಂತರ ನಿಷೇಧ ಜಾರಿಗೆ ತಂದಾಗ್ಯೂ ಅನ್ವರ್ ಪಾಶಾ ಹೆಸರಿನ ವ್ಯಕ್ತಿಯ ನೇತೃತ್ವದ ಒಂದು ಗುಂಪು ನಗರದ ಬನಶಂಕರಿ ಪ್ರದೇಶದಲ್ಲಿ ತನ್ನ ಕರಾಳ ಕೃತ್ಯದಲ್ಲಿ ನಿರತವಾಗಿದ್ದು ನಿಜಕ್ಕೂ ಆಘಾತಕಾರಿ.
ಬೆಂಗಳೂರಲ್ಲಿ ಹಿಂದೂ ಯುವಕರನ್ನು ಬಲವಂತದಿಂದ ಇಸ್ಲಾಂ ಧರ್ಮಕ್ಕೆ (Islam religion) ಮತಾಂತರ ಒಂದು ರಕ್ಕಸ ಜಾಲ ಕಾರ್ಯಶೀಲವಾಗಿರುವುದು ಬೆಳಕಿಗೆ ಬಂದಿದೆ. ಮಂಡ್ಯದ ಒಬ್ಬ ಯುವಕ ಸಹಾಯ ಕೇಳಿಕೊಂಡು ಬಂದಾಗ ಜಾಲದ ಸದಸ್ಯರು ಅವನಿಗೆ ನಾನಾ ರೀತಿಯ ಮಾನಸಿಕ ಹಾಗೂ ದೈಹಿಕ ಹಿಂಸೆ ನಡೆಸಿ ಬಲವಂತದಿಂದ ಮತಾಂತರ ಮಾಡಿದ್ದಾರೆ. ಇಸ್ಲಾಂ ಧರ್ಮದ ಒಂದು ಸಂಸ್ಕಾರವಾಗಿರುವ ಸುನ್ನತಿಯನ್ನೂ (Circumcision) ಯುವಕನಿಗೆ ಮಾಡಿಸಲಾಗಿದೆ. ಮುಂದಿನ 3-4 ದಶಕಗಳಲ್ಲಿ ಭಾರತವನ್ನು ಇಸ್ಲಾಮೀಕರಣಗೊಳಿಸುವುದು ಇವರ ಉದ್ದೇಶವಾಗಿದೆ ಎಂದು ಯುವಕ ಹೇಳುತ್ತಾನೆ. ರಾಜ್ಯದಲ್ಲಿ ಮತಾಂತರ ನಿಷೇಧ ಜಾರಿಗೆ ತಂದಾಗ್ಯೂ ಅನ್ವರ್ ಪಾಶಾ (Anwar Pasha) ಹೆಸರಿನ ವ್ಯಕ್ತಿಯ ನೇತೃತ್ವದ ಒಂದು ಗುಂಪು ನಗರದ ಬನಶಂಕರಿ ಪ್ರದೇಶದಲ್ಲಿ ತನ್ನ ಕರಾಳ ಕೃತ್ಯದಲ್ಲಿ ನಿರತವಾಗಿರದ್ದು ನಿಜಕ್ಕೂ ಆಘಾತಕಾರಿ. ವಿಡಿಯೋದಲ್ಲಿ ಯುವಕ ಹೇಳುವುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ.
Latest Videos