ಕೆಲ ಬಾಲಿವುಡ್ ನಟಿಯರು ತಮ್ಮ ತಾರಾಪತಿಗಳಿಗಿಂತ ಹೆಚ್ಚು ಸಂಪಾದನೆ ಮಾಡಿದರೂ ಹೊಂದಾಣಿಕೆಯಿಂದ ಬಾಳ್ವೆ ನಡೆಸುತ್ತಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 30, 2021 | 4:26 PM

ನಮ್ಮ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಸಹ ತನ್ನ ಗಂಡ ರಣವೀರ್ ಸಿಂಗ್ ಅವರಿಗಿಂತ ಹೆಚ್ಚು ದುಡಿಮೆ ಮಾಡುತ್ತಾರೆ. ಡೀಪ್ಸ್ ಅವರು ವರ್ಷವೊಂದಕ್ಕೆ ರೂ. 360 ಕೋಟಿ ದುಡಿದರೆ ರಣವೀರ್ ರೂ. 307 ಕೋಟಿ ಸಂಪಾದನೆ ಮಾಡುತ್ತಾರೆ.

ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾದ ನಂತರ ಬಾಲಿವುಡ್ ದಂಪತಿಗಳ ಹಲವಾರು ವಿಷಯಗಳು ಬೆಳಕಿಗೆ ಬರಲಾರಂಭಿಸಿವೆ. ಈಗ ಚರ್ಚೆಯಾಗುತ್ತಿರುವ ವಿಷಯವೇನು ಗೊತ್ತಾ? ಗಂಡನ ಸಂಪಾದನೆ ಹೆಚ್ಚೋ ಅಥವಾ ಹೆಂಡತಿಯದೋ ಅನ್ನೋದು. ಬಾಲಿವುಡ್ ನಟ-ನಟಿಯರು ಕೋಟಿಗಳಲ್ಲಿ ಸಂಪಾದಿಸುವುದು ನಮಗೆ ಗೊತ್ತಿರುವ ಸಂಗತಿ. ಆದರೆ ಅಸಲು ಸಂಗತಿಯೇನೆಂದರೆ, ಕೆಲವು ನಟಿಯರು ತಮ್ಮ ತಾರಾ ಪತಿಗಳಿಗಿಂತ ಹೆಚ್ಚು ಗಳಿಸುತ್ತಾರೆ. ಕತ್ರೀನಾ ವಿಷಯವನ್ನೇ ತೆಗೆದುಕೊಳ್ಳಿ. ಅವರು ವಯಸ್ಸು ಮತ್ತು ಆದಾಯ ಎರಡರಲ್ಲೂ ತಮ್ಮ ಪತಿ ವಿಕ್ಕಿಗಿಂತ ಮುಂದಿದ್ದಾರೆ. ನಟಿಯ ವಾರ್ಷಿಕ ಆದಾಯ ರೂ. 220 ಕೋಟಿಗಳಾದರೆ, ವಿಕ್ಕಿ ಒಂದು ವರ್ಷಕ್ಕೆ ದುಡಿಯೋದು ಕೇವಲ ರೂ. 22 ಕೋಟಿ ಮಾತ್ರ.

ನಮ್ಮ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಸಹ ತನ್ನ ಗಂಡ ರಣವೀರ್ ಸಿಂಗ್ ಅವರಿಗಿಂತ ಹೆಚ್ಚು ದುಡಿಮೆ ಮಾಡುತ್ತಾರೆ. ಡೀಪ್ಸ್ ಅವರು ವರ್ಷವೊಂದಕ್ಕೆ ರೂ. 360 ಕೋಟಿ ದುಡಿದರೆ ರಣವೀರ್ ರೂ. 307 ಕೋಟಿ ಸಂಪಾದನೆ ಮಾಡುತ್ತಾರೆ. ಬಿಗ್ ಬಿ ಸುಪುತ್ರ ಅಭಿಷೇಕ್ ಬಚ್ಚನ್ ಅಪ್ಪನ ಹೆಸರಿನ ಹೊರತಾಗಿಯೂ ಬಾಲಿವುಡ್ ನಲ್ಲಿ ಹೇಳಿಕೊಳ್ಳುವಂಥ ಸಾಧನೆಯೇನೂ ಮಾಡಿಲ್ಲ. ಅವರು ನಾಯಕನಾಗಿ ನಟಿಸಿದ ಚಿತ್ರಗಳು ನೆಲಕಚ್ಚುತ್ತವೆ. ಹಾಗಾಗೇ, ಅವರನ್ನು ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ಕಾಸ್ಟ್ ಮಾಡಲಾಗುತ್ತದೆ.

ಅಂದಹಾಗೆ, ವಯಸ್ಸಿನಲ್ಲಿ ಪತ್ನಿ ಐಶ್ವರ್ಯ ರೈ ಬಚ್ಚನ್ ಗಿಂತ ಕಿರಿಯರಾಗಿರುವ ಅಭಿಷೇಕ್ ಸಂಪಾದನೆಯೂ ಪತ್ನಿಗಿಂತ ಕಡಿಮೆಯೇ. ಅವರು ವರ್ಷಕ್ಕೆ ರೂ 203 ಕೋಟಿ ಸಂಪಾದನೆ ಮಾಡಿದರೆ, ಐಶ್ ರೂ. 227 ಕೋಟಿ ಗಳಿಸುತ್ತಾರೆ.

ಈ ಶತಮಾನದ ಮೊದಲ ದಶಕದಲ್ಲಿ ಬಿಪಾಶಾ ಬಸು ಭಾರಿ ಹೆಸರು ಮಾಡಿದ್ದರು. ಆದರೆ, ವಿವಾದಗಳ ಸುಳಿಗೆ ಸಿಕ್ಕು ತಮ್ಮ ಕರೀಯರ್ ಹಾಳು ಮಾಡಿಕೊಂಡರು. ಅಷ್ಟಾಗಿಯೂ ಅವರು ತನಗಿಂತ ಮೂರು ವರ್ಷ ಕಿರಿಯವರಾಗಿರುವ ಪತಿ ಕರಣ್ ಸಿಂಗ್ ಗ್ರೋವರ್ ಗಿಂತ ಹತ್ತು ಪಟ್ಟು ಜಾಸ್ತಿ ಸಂಪಾದನೆ ಮಾಡುತ್ತಾರೆ! ಅವರ ವಾರ್ಷಿಕ ಆದಾಯ ರೂ. 113 ಕೋಟಿಗಳಾದರೆ, ಕರಣ್ ಗಳಿಸೋದು ಕೇವಲ ರೂ. 13 ಕೋಟಿ ಮಾತ್ರ.

ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ಮತ್ತು ಹಾಲಿವುಡ್ ಎರಡೂ ವುಡ್ಗಳಲ್ಲಿ ಪಯಣಿಸುತ್ತಿದ್ದಾರೆ. ಪತಿ ಅಮೆರಿಕದ ಗಾಯಕ ನಿಕ್ ಜೋನಾಸ್ ಗಿಂತ 13 ವರ್ಷ ಹಿರಿಯರಾಗಿರುವ ಪ್ರಿಯಾಂಕಾ ವರ್ಷಕ್ಕೆ ರೂ. 520 ಕೋಟಿ ಸಂಪಾದನೆ ಮಾಡಿದರೆ, ಜೋನಾಸ್ ಸಂಪಾದನೆ ರೂ. 223 ಕೋಟಿ ಮಾತ್ರ.

ಗಳಿಕೆಯಲ್ಲಿ ಈ ನಟಿಯರು ಮುಂದಿದ್ದರೂ ತಮ್ಮ ಪತಿಗಳ ಜೊತೆ ಹೊಂದಾಣಿಕೆಯೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಅದನ್ನು ಮೆಚ್ಚಲೇಬೇಕು ಮಾರಾಯ್ರೇ!

ಇದನ್ನೂ ಓದಿ: Love You Rachchu: ‘ಲವ್​ ಯೂ ರಚ್ಚು’ನಲ್ಲಿ ಮಿಲನಾ, ಡಾರ್ಲಿಂಗ್ ಕೃಷ್ಣಗೆ ಇಷ್ಟ ಆಗಿದ್ದೇನು? ವಿಡಿಯೋ ಇಲ್ಲಿದೆ

Published on: Dec 30, 2021 04:26 PM