ತಮ್ಮ ಪ್ರೀತಿಯ ಪವರ್ ಸ್ಟಾರ್ಗೆ ಶ್ರದ್ಧಾಂಜಲಿ ಅರ್ಪಿಸಲು ಈ ಅಭಿಮಾನಿಗಳು ಮೈಸೂರಿನಿಂದ ಬೆಂಗಳೂರಲ್ಲಿರುವ ಸಮಾಧಿವರೆಗೆ ನಡೆದು ಬಂದರು!
ಅವರು ನಡೆದು ಬರುತ್ತಿರುವ ಸಮಾಚಾರ ಗೊತ್ತಾಗುತ್ತಿದ್ದಂತೆ ರಾಘವೇಂದ್ರ ರಾಜಕುಮಾರ್ ಮತ್ತು ಅವರ ಮಗ ಯುವರಾಜ ಕುಮಾರ್ ಅಪ್ಫು ಸಮಾಧಿ ಬಳಿ ಬಂದು ಅಭಿಮಾನಿಗಳನ್ನು ಬರಮಾಡಿಕೊಂಡಿದ್ದಾರೆ.
ಪವರ್ ಸ್ಟಾರ್ ಕನ್ನಡಿಗರನ್ನು ಅಗಲಿ ಸರಿಯಾಗಿ ಎರಡು ತಿಂಗಳು ಕಳೆಯಿತು. ಜನ ಮತ್ತು ಅಪ್ಪು ಅಭಿಮಾನಿಗಳು ಈಗಲೂ ಕಂಠೀರವ ಸ್ಟುಡಿಯೋನಲ್ಲಿರುವ ಅವರ ಸಮಾಧಿಗೆ ಬಂದು ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರಿಯಲಿದೆ. ಪುನೀತ್ ಅವರನ್ನು ಜನ ಅದೆಷ್ಟು ಇಷ್ಟಪಡುತ್ತಿದ್ದರು ಅನ್ನೋದು ವಿಶ್ವದೆಲ್ಲೆಡೆ ಗೊತ್ತಾಗಿದೆ. ಜನರ ಪ್ರೀತಿಗೆ ಮತ್ತೊಂದು ನಿದರ್ಶನ ಬುಧವಾರ ಬೆಂಗಳೂರು ನಗರದಲ್ಲಿ ಸಿಕ್ಕಿದೆ. ಇಲ್ಲಿರುವ ವಿಡಿಯೋವನ್ನೊಮ್ಮೆ ನೋಡಿ. ಸುಮಾರು 30 ಜನರ ಒಂದು ಗುಂಪು ಪುನೀತ್ ಅವರಿಗೆ ಜೈಕಾರ ಹಾಕುತ್ತಾ ಕಂಠೀರವ ಸ್ಟುಡಿಯೋನತ್ತ ನಡೆದು ಬರುತ್ತಿದೆ. ಈ ಗುಂಪಿನಲ್ಲಿ ಎಲ್ಲ ವಯಸ್ಸಿನವರಿದ್ದಾರೆ. ಹದಿಹರೆಯದವರು, ಯುವಕರು ಮತ್ತು ವಯಸ್ಕರನ್ನು ನೀವು ನೋಡಬಹುದು.
ಅಂದಹಾಗೆ ಈ ಅಪ್ಪು ಅಭಿಮಾನಿಗಳು ಮೈಸೂರಿನವರು. ಅಪ್ಪು ಅವರ ಫೋಟೋಗಳನ್ನು ಹೊತ್ತುಕೊಂಡು ಅವರು ಅಮರವಾಗಲಿ ಅಂತ ಇವರು ಮೈಸೂರಿನಿಂದ ಬೆಂಗಳೂರಿಗೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಹೌದು 150 ಕ್ಕೂ ಹೆಚ್ಚು ಕಿಮೀ ಗಳ ದೂರವನ್ನು ನಡೆದು ಬಂದಿದ್ದಾರೆ. ಅಪ್ಪು ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ಅವರು ಹೀಗೆ ಪ್ರದರ್ಶಿಸಿದ್ದಾರೆ.
ಅವರು ನಡೆದು ಬರುತ್ತಿರುವ ಸಮಾಚಾರ ಗೊತ್ತಾಗುತ್ತಿದ್ದಂತೆ ರಾಘವೇಂದ್ರ ರಾಜಕುಮಾರ್ ಮತ್ತು ಅವರ ಮಗ ಯುವರಾಜ ಕುಮಾರ್ ಅಪ್ಫು ಸಮಾಧಿ ಬಳಿ ಬಂದು ಅಭಿಮಾನಿಗಳನ್ನು ಬರಮಾಡಿಕೊಂಡಿದ್ದಾರೆ. ಅಭಿಮಾನಿಗಳಲ್ಲಿ ಅನೇಕರು ರಾಘಣ್ಣನ ಕಾಲುಮುಟ್ಟಿ ನಮಸ್ಕರಿಸುತ್ತಿರುವುದು ವಿಡಿಯೋನಲ್ಲಿ ನಿಮಗೆ ಕಾಣುತ್ತದೆ.
ಗುಂಪಿನ ಹಿರಿಯರೊಬ್ಬರು ತಮ್ಮ ಉದ್ದೇಶವನ್ನು ಮಾಧ್ಯಮದವರಿಗೆ ಹೇಳಿದ್ದಾರೆ. ಶನಿವಾರದಂದು ಮೈಸೂರಿನಿಂದ ಹೊರಟು ಬುಧವಾರ ಇಲ್ಲಿಗೆ ಬಂದು ಸೇರಿದ್ದಾರೆ. ಇವರ ಪ್ರೀತಿ ಹಾಗೂ ಅಭಿಮಾನ ಹೇಗೆ ವರ್ಣಿಸಬೇಕು ಅಂತ ಅರ್ಥವಾಗುತ್ತಿಲ್ಲ ಮಾರಾಯ್ರೇ!
ಇದನ್ನೂ ಓದಿ: Viral Video: ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು; ಕಣ್ಣಲ್ಲೇ ಒಡೆಯನಿಗೆ ಮನವಿ ಮಾಡಿದ ನಾಯಿಯ ವಿಡಿಯೋ ವೈರಲ್